ರಾಯಬಾಗ 27: ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವಿಸಿದ್ದು, ಕೂಡಲೇ ಸರಕಾರ ನೆರೆ ಮಹಾರಾಷ್ಟ್ರ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಡಿ.ಎಚ್.ಕೋಮರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿದ್ದು, ಎಲ್ಲೆಡೆ ಜನಜಾನುವಾರುಗಳಿಗೆ ನೀರಿನ ಮತ್ತು ಮೇವಿನ ಕೊರತೆ ಉಂಟಾಗಿದೆ. ತಾಲೂಕಿನಲ್ಲಿ ಪ್ರಮುಖ ಜಲ ಮೂಲವಾದ ಕೃಷ್ಣಾ ನದಿ ಬತ್ತಿ ಹೋಗಿ ತಿಂಗಳು ಕಳೆದು ಹೋಗಿದೆ. ಇದರಿಂದ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಜನ-ಜನವಾರುಗಳು ಕಷ್ಟಪಡುವಂತಾಗಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಸರಕಾರ ಇನ್ನುವರೆಗೂ ಎಚ್ಚೆತ್ತುಕೊಳ್ಳದೇ ನಿದ್ರಾವಸ್ಥೆಯಲ್ಲಿರುವುದು ಈ ಭಾಗದ ಜನರನ್ನು ಕೆರಳಿಸಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಹಿಂದಿನ ಯಾವುದೇ ಜಲಸಂಪನ್ಮೂಲ ಖಾತೆ ಸಚಿವರು ಹಿಡಕಲ್ಡ್ಯಾಂ ನಿಂದ ಕೃಷ್ಣಾ ನದಿಗೆ ನೀರು ಹರಿಸುವ ದುಸ್ಸಾಹಸಕ್ಕೆ ಕೈಹಾಕಿರುವುದಿಲ್ಲ. ಆದರೆ ಈಗಿನ ಸಚಿವರು ಈ ಇಂತಹ ಕಾರ್ಯ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸರಕಾರ ಕೂಡಲೇ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಕೃಷ್ಣಾ ನದಿಗೆ ಕೋಯ್ನಾ ಡ್ಯಾಂದಿಂದ ನೀರು ಹರಿಸಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ನೀರಿನ ಮತ್ತು ಮೇವಿನ ವ್ಯವಸ್ಥೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ತಾಲೂಕಾದ್ಯಾಂತ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರೈತ ಮುಖಂಡರಾದ ಸತ್ತೆಪ್ಪಾ ಮಲ್ಲಾಪೂರೆ, ಗಣಪತಿ ಈರಗಾರ, ಗುರುನಾಥ ಹೆಗಡೆ, ಶಂಕರ ಪಡೆದ, ಮಹಾದೇವ ಮಡಿವಾಳ, ಪ್ರಕಾಶ ಪಾಟೀಲ, ಭೀಮಸಿ ಗಡಾದೆ, ಶಿವಾಜಿ ಪಾಟೀಲ, ಮಾರುತಿ ಮುರಗಜ್ಜನವರ, ಲಕ್ಕಪ್ಪಖೋತ, ನಾರಾಯಣ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.