ರಾಯಬಾಗ(ಜಿ.ಬೆಳಗಾವಿ) 22: ಸಂಕೇಶ್ವರದ ದುರದುಂಡೇಶ್ವರ ವಿದ್ಯಾವರ್ದಕ ಸಂಘದ ಅನ್ನಪೂಣರ್ಾ ಮ್ಯಾನೇಜಮೆಂಟ್ ಸಂಶೋಧನಾ ಸಂಸ್ಥೆಯವರು ಸಂಘಟಿಸಿದ್ದ "ಆರಂಭ" ಹೆಸರಿನ ರಾಷ್ಟ್ರೀಯ 2019ರ ಹಬ್ಬ ಸ್ಪಧರ್ೆಯಲ್ಲಿ ಸಮೂಹ ನೃತ್ಯ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗದ ಎಸ್.ಪಿ.ಮಂಡಳದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.
2019ರ ಫೆಬ್ರವರಿ ದಿ.13 ಮತ್ತು 14 ರಂದು ನಡೆದ ಸ್ಪಧರ್ೆಯಲ್ಲಿ 48 ತಂಡಗಳು ಭಾಗವಹಿಸಿದ್ದು, ಈ ಸ್ಪಧರ್ೆಯಲ್ಲಿ ರಾಯಬಾಗ ತಂಡವು ಹಿನ್ನಲೆ ಹಾಡು ಮತ್ತು ಸಮೂಹ ನೃತ್ಯ ವಿಭಾಗದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಚೆರಮನ್ನ ಬ್ಯಾರಿಸ್ಟರ ಅಮರಸಿಂಹ ಪಾಟೀಲ, ಯುವಧುರೀಣ, ಅಧ್ಯಕ್ಷ ತ್ರಿಕಾಲ ಪಾಟೀಲ, ನಿದರ್ೇಶಕರಾದ ಭಾಗ್ಯಶ್ರೀ ಪಾಟೀಲ, ಪೂಣರ್ಿಮಾ ಪಾಟೀಲ ಮತ್ತು ಪ್ರಾಂಶುಪಾಲರಾದ ಪ್ರೊ.ಪಿ.ಬಿ.ಮುನ್ಯಾಳ, ಡಿ.ಎಸ್.ಗುಡದಿನ್ನಿ ಹಾಗೂ ಸಿಬ್ಬಂದಿ ಅಭಿನಂದನಂದಿಸಿದ್ದಾರೆ
ಪ್ರೊ.ವಿದ್ಯಾಶ್ರೀ ಅಲಗೂರ ಮತ್ತು ಪ್ರೊ.ಅಮರ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳಿಗೆ ತರಬೇತಿ ನೀಡಲಾಗಿತ್ತು. ಸಮೂಹ ನೃತ್ಯದಲ್ಲಿ ಬಿ.ಕಾಂ.ವಿಭಾಗದ ವಿದ್ಯಾಥರ್ಿಗಳಾದ ಸಚೀನ ಡಂಗೇರ, ಚೇತನ ಜಾಧವ, ಪರಶುರಾಮ ನಿಂಗನೂರೆ, ಗುಲ್ನಾಚ್ ಶೇಖ ಮತ್ತು ಅನ್ನಪೂಣರ್ಾ ಬೆಳಕೊಡೆ ಭಾಗವಹಿಸಿದ್ದರು.