ಕೊಪ್ಪಳ 12: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಲಾಯಿತು.
ಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಗೆ ಸಂಬಂಧಿಸಿದಂತೆ ಭತ್ತ ಖರೀದಿ ಕೇಂದ್ರವನ್ನು ಕಾರಟಗಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಆಡಳಿತ ಕಛೇರಿಯ ಮುಂಭಾಗದಲ್ಲಿ ಸ್ಥಾಪಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾದ ಭಾವಿ ಶರಣಪ್ಪ ಅವರು ಇತ್ತೀಚೆಗೆ ಚಾಲನೆ ನೀಡಿದರು.
ಭತ್ತ ಖರೀದಿ ಕೇಂದ್ರದಲ್ಲಿ ಡಿ. 15 ರವರೆಗೆ ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಡಿ. 16 ರಿಂದ 2019ರ ಮಾಚರ್್. 31 ರವರೆಗೆ ನೋಂದಾಯಿತ ರೈತರಿಂದ ಉತ್ತಮ ಗುಣಮಟ್ಟದ ಭತ್ತವನ್ನು ಮಿಲ್ಲುಗಳಲ್ಲಿ ಶೇಖರಿಸುವ ಕಾರ್ಯ ಮಾಡಲಾಗುತ್ತದೆ. ಸಮಿತಿಯ ಉಪಾಧ್ಯಕ್ಷ ಗಂಗಾಧರ ಕುಮಾರೆಪ್ಪ, ಸದಸ್ಯರಾದ ತಿರುಪತೆಪ್ಪ ಯಮನಪ್ಪ ಗುಡತಾಳ, ಸಣ್ಣಪ್ಪ ಈಶ್ವರಪ್ಪ ಬಾವಿಕಟ್ಟಿ, ಹನ್ಮನಗೌಡ ಬೋಳಾಡೆಪ್ಪ, ಸೋಮಶೇಖರಗೌಡ ಬಸನಗೌಡ ಹಾಗೂ ಸಮಿತಿಯ ಕಾರ್ಯದಶರ್ಿ ಎಸ್. ಶ್ಯಾಮ್, ಆಹಾರ ಇಲಾಖೆಯ ಗುಣಮಟ್ಟ ನಿರೀಕ್ಷಕ ಅಮರೇಶ್, ಸಹಾಯಕ ಕೃಷಿ ಅಧಿಕಾರಿ ರಾಮಚಂದ್ರಪ್ಪ ಲಮಾಣಿ, ಕೃಷಿ ಇಲಾಖೆಯ ಉತ್ತೇಜಕ ತಿಮ್ಮಣ್ಣ ದಾಸರ್, ಮುಖಂಡರಾದ ಚಂದ್ರಶೇಖರ ಮುಸಾಲಿ ಸೇರಿದಂತೆ ರೈತ ಮತ್ತು ರೈತ ಮಹಿಳೆಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.