ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀಮಠಕ್ಕಿದೆ: ತಮ್ಮಣ್ಣವರ

Sri Math has the power to fulfill the wishes of the devotees: Thammannavara

 ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀಮಠಕ್ಕಿದೆ: ತಮ್ಮಣ್ಣವರ 

ಹಾರೂಗೇರಿ  25: ಶ್ರೀ ಶಿವಾನಂದ ಭಾರತಿ ಅಪ್ಪಂಗಳವರು ಶ್ರೀ ಚನ್ನವೃಷಭೇಂದ್ರರ ಪ್ರತಿರೂಪ. ಅವರ ದಿವ್ಯ ಶಕ್ತಿಯಿಂದ ಹಾರೂಗೇರಿಯಲ್ಲಿ ಸಮಾನತೆ, ಜಾತ್ಯಾತೀತ ಮಠ ನಿರ್ಮಾಣಗೊಂಡಿದೆ. ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀಮಠಕ್ಕಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.  ಪಟ್ಟಣದ ಗುರು ಚನ್ನವೃಷಭೇಂದ್ರ ಮಹಾರಾಜರ ಲೀಲಾಮಠದಲ್ಲಿ ನಡೆಯುತ್ತಿರುವ 99ನೇ ವರ್ಷದ ಮಹಾಶಿವರಾತ್ರಿ ಸಪ್ತಾಹ ಹಾಗೂ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಮೂರ್ತಿಗೆ ಸುವರ್ಣ ಕೀರೀಟ ಧಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಕ್ಷೇತ್ರ ಹಾರೂಗೇರಿ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠ ಭಕ್ತಿಯೋಗದ ಅಕ್ಷಯಪಾತ್ರೆ ಇದ್ದಂತೆ. ಶ್ರೀಮಠದ ಶಕ್ತಿಯೇ ಜಾತ್ಯಾತೀತ ಮತ್ತು ಜ್ಞಾನದಾಸೋಹದ ಪರಂಪರೆಯಾಗಿದೆ. ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಲೀಲಾಮೂರ್ತಿಗಳು. ಶತಮಾನಗಳ ಕಾಲ ಭೂಮಿಯ ಮೇಲಿನ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸಿ, ಧರ್ಮವನ್ನು ರಕ್ಷಿಸಿ, ಪವಾಡಗಳನ್ನು ಮಾಡಿ, ಭಕ್ತರ ಆರಾಧ್ಯ ದೈವರಾದ ಪವಾಡ ಪುರುಷರು ಎಂದು ಶಾಸಕ ಮಹೇಂದ್ರ ಹೇಳಿದರು.  ಶ್ರೀಮಠದ ಪ್ರಧಾನ ಅರ್ಚಕ ಚನ್ನಬಸಯ್ಯ ಮಠಪತಿ ಸ್ವಾಮೀಜಿ ಮಾತನಾಡುತ್ತ ಅಂತರಂಗ ಮತ್ತು ಬಹಿರಂಗ ಶುದ್ಧಿಯು ಶಿವನಾಮದಿಂದ ಮಾತ್ರ ಸಾಧ್ಯವಿದೆ. ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವೇ ಮೊದಲ ಮೆಟ್ಟಿಲಾಗಿದೆ. ಬಾಹ್ಯ ಪ್ರಪಂಚದ ಅಧ್ಯಯನಕ್ಕಿಂತ ಅಂತರಂಗದೊಳಗಿನ ಆತ್ಮದ ಶುದ್ಧಿ ಬಹಳ ಮುಖ್ಯ. ಸದ್ಗುಣಗಳಿಂದ ಕೂಡಿದ ಮನಸ್ಸುಗಳಿಂದ ಮಾತ್ರ ದುರ್ಗುಣಗಳನ್ನು ದೂರ ಮಾಡಲು ಸಾಧ್ಯವಿದೆ ಎಂದು ಹೇಳಿದರು. ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ, ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ನೇಮಿನಾಥ ಕೊತ್ತಲಗಿ, ಲಾಲಸಾಬ ಜಮಾದಾರ, ಜ್ಯೋತೆಪ್ಪ ಉಮರಾಣಿ, ಅಮರ ಬಂತಿ, ಚನ್ನಬಸು ಗಾಳಿ, ಭುಜಪ್ಪ ಸದಲಗಿ, ನರಸಪ್ಪ ದಟವಾಡ, ಸುರೇಶ ಅರಕೇರಿ, ಮನ್ವಿತ್ ಅರಕೇರಿ, ಹನಮಂತ ನಾಗನೂರ, ಗೋಪಾಲ ಧರ್ಮಟ್ಟಿ, ಭಗವಂತ ಬಂತಿ, ರಾಜು ಕರ್ಣವಾಡಿ, ರಾಘವೇಂದ್ರ ದೇಶಪಾಂಡೆ, ಸುಭಾಸ ಸಂಗನಗೌಡರ, ಜಿನ್ನಪ್ಪ ಸುಬ್ಬಣ್ಣವರ, ಮಾರುತಿ ಹಾಡಕಾರ  ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.