ಎಲ್ಲಾ ಮಾದರಿಗಳ ಕ್ರಿಕೆಟ್ನಿಂದ ಶ್ರೀಲಂಕಾ ಆಟಗಾರ ಗುಣತಿಲಕ ಅಮಾನತು!


ಕೊಲೊಂಬೋ: ಶ್ರೀಲಂಕಾ ತಂಡದ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರನ್ನು ಎಲ್ಲಾ ಮಾದರಿಗಳ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ.  

ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದ್ದು,  ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಗುಣತಿಲಕ ಅವರನ್ನು ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಗುಣತಿಲಕ ಅವರ ಸಂಭಾವನೆಯನ್ನೂ ತಡೆ ಹಿಡಿಯಲಾಗಿದೆ.  

ಶ್ರೀಲಂಕಾ ಕ್ರಿಕೆಟ್ ನಿಂದ ಪ್ರಾಥಮಿಕ ಹಂತದ ವಿಚಾರಣೆಗೆ ಆದೇಶ ನೀಡಿದ ಬೆನ್ನಲ್ಲೆ ಅಮಾನತು ಮಾಡಲಾಗಿದೆ. ಈ ಹಿಂದೆಯೂ ಗುಣತಿಲಕ ಶಿಸ್ತುಕ್ರಮ ಎದುರಿಸಿದ್ದರು.