ಇಂದು ಕಂಪ್ಲಿ ಕೋಟೆಯಲ್ಲಿ ವಸಂತೋತ್ಸವ ಕಾರ್ಯಕ್ರಮ

Spring festival at Kampli fort today

ಇಂದು ಕಂಪ್ಲಿ ಕೋಟೆಯಲ್ಲಿ ವಸಂತೋತ್ಸವ ಕಾರ್ಯಕ್ರಮ 

ಕಂಪ್ಲಿ 13: ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ವಿರಾಜಮಾನನಾಗಿರುವ  ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಟೆ ಪಂಪಾಪತಿ ಹಾಗೂ ಹಂಪಮ್ಮನವರ  ಮಹಾರಥೋತ್ಸವವು ಭರತ ಹುಣ್ಣಿಮೆಯ ದಿನವಾದ ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಕಳೆದ ಫೆ.10 ರಂದು ಕಂಕಣಧಾರಣೆ, ಕಳಸಧಾರಣೆ ಹಾಗೂ ಪಂಪಾಪತಿ ಮತ್ತು ಹಂಪಮ್ಮನವರ ವಿವಾಹ ಮಹೋತ್ಸವವು ಹಾಗೂ ಫೆ.11 ರಂದು ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ  ಜರುಗಿದ್ದವು.  

ಇಂದು ಬೆಳಿಗ್ಗೆ ಪಂಪಾಪತಿ ಶಿಲಾಮೂರ್ತಿಗೆ ವಿಶೇಷ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ಸಕಲ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಜರುಗಿದವು. ನಂತರ ಕೋಟೆ ಹಾಗೂ ಕಂಪ್ಲಿಯ ಸಕಲ ಸದ್ಭಕ್ತರು ಸ್ವಾಮಿಗೆ ವಿಶೇಷ ನೈವೇದ್ಯವನ್ನು ಸಮರೆ​‍್ಣ ಮಾಡಿದರು. ಸಂಜೆಯ ಸೂರ್ಯನು ಪಡುವಣ ದಿಕ್ಕಿನಲ್ಲಿ ಜಾರುತ್ತಿರಲು ಮಂಗಳ ವಾದ್ಯ ಮತ್ತು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸ್ವಾಮಿಯ ರಥ ವಿಜೃಂಭಣೆಯಿಂದ ಸಾಗಿತು.ಸಾರ್ವಜನಿಕರು  ತೇರಿಗೆ ಉತ್ತತ್ತಿ,ಹೂಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ​‍್ಿಸಿದರು. ಜಾತ್ರಾ ಮಹೋತ್ಸವ ಹಾಗೂ ಪಂಪಾಪತಿ ದೇವಸ್ಥಾನ ಅಭಿವೃದ್ದಿ ಸಮಿತಿ ಪದಾಧಿಕಾರಿಗಳು ನೇತೃತ್ವವನ್ನು ವಹಿಸಿದ್ದರು.  

ಫೆ.14 ರಂದು ರಾತ್ರಿ 9 ಕ್ಕೆ ವಸಂತೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಸಂಚಾರಕ್ಕೆ ಅಡಚಣೆಃ- ಸ್ವಾಮೀಯ ರಥೋತ್ಸವವು ಕಂಪ್ಲಿ ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಜರುಗಿದ್ದರಿಂದ ಎರಡು ಕಡೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಎರಡು ತಾಸುಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿತ್ತು.