ಸಂಕೇಶ್ವರ : ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯನ್ನು ಸಾಲಮುಕ್ತ ಮಾಡದಿದ್ದರೂ, ಆರ್ಥಿಕ ಸಂಕಷ್ಠದಿಂದ ಹೊರ ಬರಲು ಯಥಿನಾಲ್ ಯೋಜನೆ ಪ್ರಾರಂಭದ ಜೊತೆಗೆ ಹಿರಣ್ಯಕೇಶಿ ಸಕ್ಕರೆ ಕಾರಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ಅರ್ಧ ಕೇಜಿ ಸಕ್ಕರೆ ನೀಡುವ ಹಾಗೂ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವದಾಗಿ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.
ಹಿರಣ್ಯಕೇಶಿ ಸಕ್ಕರೆ ಕಾರಖಾನೆಯನ್ನು ಲೀಜ್ ಪಡೆಯುವಂತೆ ನಮಗೂ ಪ್ರಪೋಜಲ್ ಬಂದಿತ್ತು. ಆದರೆ ಎಲ್ಲ ಆಡಳಿತ ಮಂಡಳಿ ಸದಸ್ಯರುಗಳು ಒಂದೇಡೆ ಇರುವದಾದರೆ ಲೀಜ್ ಪಡೆಯುವದಾಗಿ ಹೇಳಿದ್ದೆ, ಆದರೆ ಕೆಲ ಆಡಳಿತ ಮಂಡಳಿ ನಿರ್ದೇಶಕರು ಸಹಕಾರ ತತ್ವದಡಿಯಲ್ಲಿ ನಡೆಸುವ ಬಗ್ಗೆ ನಿರ್ಧಾರ ಮಾಡಿದರು. ಅದಕ್ಕೂ ಈ ಸಂಸ್ಥೆಗೆ ಬೆಳವಣಿಗೆಗೆ ಜೊಲ್ಲೆ ಸಮೂಹ ಸಂಸ್ಥೆಗಳು ಕೈ ಜೋಡಿಸಲಿವೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.
ಮಂಗಳವಾರ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ, ಜೊಲ್ಲೆ ಕುಟುಂಬವು ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಲೀಜ್ ಪಡೆಯಲು ಮುಂದಾಗಿದೆ ಎನ್ನುವ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೊಲ್ಲೆ ಅವರು, ಲೀಜ್ ಪಡೆಯಲು ನಾವು ಕೂಡಾ ಸಿದ್ದವಾಗಿದ್ದೇವು, ಆದರೆ ಕೆಲ ನಿರ್ದೇಶಕರು ಸಕ್ಕರೆ ಕಾರಖಾನೆಯನ್ನು ಸಹಕಾರ ತತ್ವದಲ್ಲಿ ಮುನ್ನಡೆಸುವ ಬಗ್ಗೆ ಧ್ವನಿ ಎತ್ತಿದರು. ಈ ಹಿನ್ನೆಲೆಯಲ್ಲಿ ಕಾರಖಾನೆಯ ಏಳ್ಗಿ ದೃಷ್ಠಿಯಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಜೊತೆ ಕೈಜೋಡಿಸಿ ಕಾರಖಾನೆಗೆ ಬೇಕಾದ ಸಹಾಯವನ್ನು ಜೊಲ್ಲೆ ಸಮೂಹ ಸಂಸ್ಥೆಗಳಿAದ ನೀಡುವದಾಗಿ ತಿಳಿಸಿದರು.
ಅಲ್ಲದೆ ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಚರ್ಚೆ ನಡೆಸಿ ಬಿಡಿಸಿಸಿ ಬ್ಯಾಂಕಿನಿAದ ಕೂಡಾ ಸಹಕಾರ ನೀಡುವದಾಗಿ ಹೇಳಿದರು. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯನ್ನು ದಿ. ಅಪ್ಪನಗೌಡಾ ಪಾಟೀಲ ಅವರು ಸಂಸ್ಥಾಪಿಸಿದ ಸಂಸ್ಥೆ ಆಗಿದ್ದು, ಈ ಸಂಸ್ಥೆಯು ಬಹುರಾಜ್ಯಗಳ ಇತಿಹಾಸದ ಸಹಕಾರ ರಂಗದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ.
ಹಿರಣ್ಯಕೇಶಿ ಕಾರಖಾನೆಯೊಂದಿಗೆ ಜೊಲ್ಲೆ ಕುಟುಂಬ ಹುಕ್ಕೇರಿ ರಾಜಕೀಯ ಕ್ಷೇತ್ರಕ್ಕೆ ಇಳಿಯುತ್ತಿದೆಯಾ ಎಂಬ ಮಾಧ್ಯಮದವರ ಕೇಳಿದ ಪ್ರಶ್ನೆಗೆ ರಾಜಕೀಯಕ್ಕೆ ಹಾಗೂ ಕಾರಖಾನೆಗೂ ಯಾವದೇ ಸಂಬಂಧ ಇಲ್ಲ. ರೈತರಿಗೆ ನೀಡುವ ಯೋಜನೆಗಳಿಂದ ಸಕ್ಕರೆ ಕಾರಖಾನೆಗೆ ಯಾವದೇ ಆರ್ಥಿಕ ಹೊರೆಯಾಗುವದಿಲ್ಲ. ಕಾರಖಾನೆಯಿಂದ ರೈತರಿಗೆ ಹಲವು ಯೋಜನೆಗೆ ಹೂಡಿಕೆ ಮಾಡಲಾಗುವದು ಎಂದು ನುಡಿದರು. ಅಲ್ಲದೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹೂಗುಚ್ಚ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಕಾರಖಾನೆಯ ನೂತನ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಸೇಟ್ಟಿ, ಹಿರಿಯ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಕ ನಾಯಕ, ಬಾಬಾಸಾಹೇಬ ಅರಬೋಳಿ, ವ್ಯವಸ್ಥಾಪಕ ನಿರ್ದೇಶಕ ಕರ್ಕಿನಾಯಕ ಸೇರಿದಂತೆ ಅನೆಕರು ಉಪಸ್ಥಿತರಿದ್ದರು.