ಇಂದು ಕಂಪ್ಲಿ ಕೋಟೆಯಲ್ಲಿ ವಸಂತೋತ್ಸವ ಕಾರ್ಯಕ್ರಮ
Spring festival at Kampli fort today
ಇಂದು ಕಂಪ್ಲಿ ಕೋಟೆಯಲ್ಲಿ ವಸಂತೋತ್ಸವ ಕಾರ್ಯಕ್ರಮ
ಕಂಪ್ಲಿ 13: ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ವಿರಾಜಮಾನನಾಗಿರುವ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಟೆ ಪಂಪಾಪತಿ ಹಾಗೂ ಹಂಪಮ್ಮನವರ ಮಹಾರಥೋತ್ಸವವು ಭರತ ಹುಣ್ಣಿಮೆಯ ದಿನವಾದ ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಕಳೆದ ಫೆ.10 ರಂದು ಕಂಕಣಧಾರಣೆ, ಕಳಸಧಾರಣೆ ಹಾಗೂ ಪಂಪಾಪತಿ ಮತ್ತು ಹಂಪಮ್ಮನವರ ವಿವಾಹ ಮಹೋತ್ಸವವು ಹಾಗೂ ಫೆ.11 ರಂದು ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ಜರುಗಿದ್ದವು.
ಇಂದು ಬೆಳಿಗ್ಗೆ ಪಂಪಾಪತಿ ಶಿಲಾಮೂರ್ತಿಗೆ ವಿಶೇಷ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ಸಕಲ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಜರುಗಿದವು. ನಂತರ ಕೋಟೆ ಹಾಗೂ ಕಂಪ್ಲಿಯ ಸಕಲ ಸದ್ಭಕ್ತರು ಸ್ವಾಮಿಗೆ ವಿಶೇಷ ನೈವೇದ್ಯವನ್ನು ಸಮರೆ್ಣ ಮಾಡಿದರು. ಸಂಜೆಯ ಸೂರ್ಯನು ಪಡುವಣ ದಿಕ್ಕಿನಲ್ಲಿ ಜಾರುತ್ತಿರಲು ಮಂಗಳ ವಾದ್ಯ ಮತ್ತು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸ್ವಾಮಿಯ ರಥ ವಿಜೃಂಭಣೆಯಿಂದ ಸಾಗಿತು.ಸಾರ್ವಜನಿಕರು ತೇರಿಗೆ ಉತ್ತತ್ತಿ,ಹೂಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಿಸಿದರು. ಜಾತ್ರಾ ಮಹೋತ್ಸವ ಹಾಗೂ ಪಂಪಾಪತಿ ದೇವಸ್ಥಾನ ಅಭಿವೃದ್ದಿ ಸಮಿತಿ ಪದಾಧಿಕಾರಿಗಳು ನೇತೃತ್ವವನ್ನು ವಹಿಸಿದ್ದರು.
ಫೆ.14 ರಂದು ರಾತ್ರಿ 9 ಕ್ಕೆ ವಸಂತೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಸಂಚಾರಕ್ಕೆ ಅಡಚಣೆಃ- ಸ್ವಾಮೀಯ ರಥೋತ್ಸವವು ಕಂಪ್ಲಿ ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಜರುಗಿದ್ದರಿಂದ ಎರಡು ಕಡೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಎರಡು ತಾಸುಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿತ್ತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 