ಬೆಳಗಾವಿ, 25: ಫೆಬ್ರುವರಿ 24 ರಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ರಾಯಬಾಗ ಎನ್ ಎಸ್ ಎಸ್ ಕ್ಯಾಂಪದ 4ನೇ ದಿನದ ಅಂಗವಾಗಿ ವಿದ್ಯಾಥರ್ಿಗಳಿಗೆ ವಿಜ್ಞಾನಕ್ಕಾಗಿ ಯುವಕರು ಮತ್ತು ಗಣಕ ಯಂತ್ರದ ಮಹತ್ವದ ಕುರಿತು ವಿಶೇಷ ಉಪನ್ಯಾಸವನ್ನು ಶ್ರೀಮತಿ ಭಾಗೀರಥಿ ಹಾಲಳ್ಳಿ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನದ ಜಿಲ್ಲಾ ಯುವಪರಿವರ್ತಕರಾದ ಮಹಮದ್ ಅಜರುದ್ದೀನ ಉಸ್ಮಾನ ಶೇಖಜಿ ಅವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಜೀವನದಲ್ಲಿ ಹೇಗೆ ಗುರಿ ಮುಟ್ಟಬೇಕು ಹಾಗೂ ತಂದೆ-ತಾಯಿಯ ಮಹತ್ವವನ್ನು ವಿದ್ಯಾಥರ್ಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಶ್ರೀಮತಿ ಶ್ರದ್ಧಾ ಬೇವಿನಕಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಯಾದ ಡಾ. ಸುಭಾಷ ಎಮ್ ಕಚಕರಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.