ಭವಿಷ್ಯದಲ್ಲಿ ಸೋಲಾರ್ ಹಾಕಿ ನಿಸರ್ಗ ಸಂಪತ್ತನ್ನು ಕಾಪಾಡಿಕೊಳ್ಳಿರಿ: ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ಅಧಿಕಾರಿ ಶಿವಾನಂದ

ಲೋಕದರ್ಶನ ವರದಿ

ಶಿರಹಟ್ಟಿ 24: ನಿಸರ್ಗ ಸಂಪತ್ತು ಸಿಕ್ಕಿರುವುದು ನಮಗೆಲ್ಲ ಒಂದು ದೇವರ ವರದಾನ ಮತ್ತು ನಮ್ಮೆಲ್ಲರ ಪುಣ್ಯ, ಅದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾದದ್ದು ಏಕೆಂದರೆ ನಿಸರ್ಗ ಸಂಪತ್ತನ್ನು ಕಾಪಾಡಿಕೊಂಡರೆ ಮಾತ್ರ ವೇಳೆಗೆ ಸರಿಯಾಗಿ ಮಳೆ ಬರುತ್ತದೆ. ಆ ಮಳೆಯಿಂದ ನಾಡಿನ ರೈತ ಸಮೂಹ ಸರಿಯಾದ ಸಮಯಕ್ಕೆ ಬೆಳೆ ಬೆಳೆದು ಇಡೀ ಜಗತ್ತಿಗೆ ಅನ್ನ ಹಾಕುತ್ತಾನೆ ಹಾಗೂ ಸರಿಯಾಗಿ ಮಳೆಯಾದರೆ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯ. ಅದರ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಸೋಲಾರ ವಿದ್ಯುತ್ ಉಪಯೋಗಿಸುವುದರಿಂದ ನಿಸರ್ಗ ಸಂಪತ್ತನ್ನು ಉಳಿಸಬಹುದು ಎಂದು ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ಅಧಿಕಾರಿ ಶಿವಾನಂದ ಆಚಾರ್ಯ ಕರೆ ನೀಡಿದರು.

ಅವರು ಇತ್ತೀಚೆಗೆ ಜಂತ್ಲಿ ಶಿರೂರ ಗ್ರಾಮದಲ್ಲಿ ನಡೆದ ಸೇಲ್ಕೋ ಸೂಲಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದಲ್ಲಿ ಕಡಿಮೆ ದರಕ್ಕೆ ಸೋಲಾರ್ ಹಾಕಲಾಗುತ್ತಿದೆ. ಇದಕ್ಕೆ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಸಹಾಯಧನ ನೀಡುತ್ತಿದ್ದು ಹೆಚ್ಚು ಜನರು ಅದನ್ನು ಉಪಯೋಗಿಸಿ ಭವಿಷ್ಯಕ್ಕೆ ನಿಸರ್ಗದ ಸಂಪತ್ತನ್ನು ಕಾಪಾಡಬೇಕು ಎಂದರು.ಮುಖ್ಯ ಅತಿಥಿಯಾಗಿ ಶಿವಣ್ಣ ಎಸ್. ಯೋಜನಾಧಿಕಾರಿಗಳು, ಮಹಾಂತೇಶ, ಬಸವರಾಜ ಹಳ್ಳಿಕೇರಿಮಠ 150ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.