ಲೋಕದರ್ಶನವರದಿ
ಶಿಗ್ಗಾವಿ 03: ಗ್ರಾಮೀಣರು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಸದುದ್ದೇಶದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಶಾಲೆ ಪ್ರಾರಂಭಿಸಿರುವ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಆದರ್ಶ ಎಲ್ಲರಿಗೂ ಮಾದರಿ ಆಗಿದೆ ಎಂದು ಗುಜರಾತ ಅಂಬುಜಾ ಎಕ್ಸ್ಪೋಟರ್್ ಕಂಪನಿಯ ಅಧ್ಯಕ್ಷ ಉಮೇಶ ಪಾಂಡೆ ಹೇಳಿದರು.
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ಶುಕ್ರವಾರ ನಡೆದ ಉತ್ಸವ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ 2018-19 ನೇ ಸಾಲಿನ ವಾಷರ್ಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಉತ್ಸವ ಶಾಲೆಯ ವಾಷರ್ಿಕೋತ್ಸವದಲ್ಲಿ ಭಾಗವಹಿಸಿರುವುದು ನನ್ನ ಅದೃಷ್ಟ ಎಂದ ಅವರು, ಸಮಾಜ ಸೇವೆಯ ಸಂಕಲ್ಪ ಹೊಂದಿರುವ ಇಂಥ ಸಂಸ್ಥೆಗಳಿಗೆ ಎಲ್ಲರೂ ಮನಃಪೂರ್ವಕವಾಗಿ ಸಹಕಾರ ನೀಡಬೇಕು ಎಂದರು.
ಶಿಕ್ಷಣ ಇಲಾಖೆಯ ನೀರಲಗಿಯ ಸಿಆರ್ಪಿ ವಿ.ಎಸ್.ಪಾಟೀಲ ಮಾತನಾಡಿ, ಉತ್ಸವ ಶಾಲೆಯು ತಾಲೂಕಿನ ಶ್ರೇಷ್ಠ ಶಾಲೆಗಳಲ್ಲಿ ಒಂದು. ಹಚ್ಚು ಹಸಿರಿನ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಅದೃಷ್ಟವಂತರು ಎಂದರು.
ಬಿಆರ್ಪಿ ರಾಘವೇಂದ್ರ ಅರಷಣಗಿ ಮಾತನಾಡಿ, ಗ್ರಾಮೀಣರ ಬಗ್ಗೆ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯು ಹೊಂದಿರುವ ಕಾಳಜಿ ಅನುಕರಣೀಯ ಎಂದರು.
ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವೇದಾರಾಣಿ ದಾಸನೂರ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಪಾಲಕ-ಬಾಲಕ-ಶಿಕ್ಷಕ ಎಂಬ ತ್ರಿಕೋನ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮಕ್ಕಳಿಂದ ಸಂಗೊಳ್ಳಿ ರಾಯಣ್ಣ ಮತ್ತು ಗಡಿಯಲ್ಲಿ ಸೈನಿಕರು ಕಿರು ನಾಟಕಗಳು, ಕೋಲಾಟ, ನೃತ್ಯಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಮುತ್ತನಗೌಡ ಪಾಟೀಲ, ವನಹಳ್ಳಿ ಗ್ರಾಪಂ ಸದಸ್ಯ ಯಲ್ಲಪ್ಪ ಸಿಂಧೆ, ಹನುಮಂತಪ್ಪ ಗುಳೇದ, ಬಿಆರ್ಪಿ ವಿ.ಎಚ್.ಬೇವಿನಹಳ್ಳಿ, ಜಯಶ್ರೀ ಸೊಲಬಕ್ಕನವರ, ಸಾವಿತ್ರಮ್ಮ ಸೊಲಬಕ್ಕನವರ, ಆನಂದಗೌಡ ಪಾಟೀಲ, ಗಂಗಾಧರ ಕೆಂಚಣ್ಣವರ ಮತ್ತಿತರರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಅಲ್ತಾಫ ಯತ್ನಳ್ಳಿ ಸ್ವಾಗತಿಸಿದರು. ದಿವ್ಯಾ ಜಕ್ಕಣ್ಣನವರ ವಂದಿಸಿದರು.