ಲೋಕದರ್ಶನ ವರದಿ
ಗದಗ: ನಗರದಲ್ಲಿಯ ಸ್ಲಂ ಪ್ರದೇಶಗಳಲ್ಲಿ ವಾಸಿಸುತ್ತಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಅಲೆಮಾರಿ ಸಮುದಾಯಗಳು ತಮ್ಮ ಪ್ರದೇಶದ ಸಮಸ್ಯೆಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕಾಗಿದೆ. ನಮ್ಮ ಕೊಳಗೇರಿ ಪ್ರದೇಶಗಳು ಅಭಿವೃದ್ಧಿ ಕಾಣಬೇಕಾದರೆ ನಗರದ ಎಲ್ಲಾ ಸ್ಲಂ ನಿವಾಸಿಗಳು ಸಂಘಟಿತರಾಗಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿಯ ಅಧ್ಯಕ್ಷರಾದ ಇಮ್ತಿಯಾಜ. ಆರ್. ಮಾನ್ವಿ ಕರೆ ನೀಡಿದರು.
ಅವರು ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯಿಂದ ನಗರದ ರಾಚೋಟೇಶ್ವರ ನಗರದ ಶಾಖೆ ಸಮಿತಿಯನ್ನು ಪುನಶ್ಚೇತನಗೊಳಿಸುವ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಕಳೆದ 12 ವರ್ಷಗಳಿಂದ ನಗರದ ಮೂಲ ನಿವಾಸಿಗಳಾದ ಕೊಳಗೇರಿ ಜನರ ಪರವಾಗಿ ಅವರ ಹಕ್ಕೋತ್ತಾಯಗಳ ಈಡೇರಿಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುವ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಯಶಸ್ವಿಯಾಗಿದೆ. ಇದಕ್ಕೆ ನಗರದ ಸ್ಲಂ ಜನರ ಸಹಕಾರ ಮತ್ತು ನಗರದಲ್ಲಿ ಸ್ಲಂ ಜನರ ನಿರಂತರ ಹೋರಾಟಗಳಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ. ಕೊಳಗೇರಿಗಳ ಅಭಿವೃದ್ಧಿ ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ಗದಗ ಜಿಲ್ಲೆಯ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಮತ್ತು ಸ್ಲಂ ಜನರಸಂಖ್ಯೆ ಅನುಗುಣವಾಗಿ ಅನುದಾನ ಮಂಜೂರು ಮಾಡಬೇಕಾಗಿದೆ.
ಇದರಿಂದ ನಗರದ ಸ್ಲಂ ಪ್ರದೇಶಗಳಲ್ಲಿರುವ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸಹಕಾರವಾಗುತ್ತದೆ. ನಮ್ಮ ಸ್ಲಂ ಜನರು ತಮ್ಮ ಪ್ರದೇಶದ ಅಭಿವೃದ್ಧಿಗಾಗಿ ಬರುವ ಅನುದಾನದ ಮಾಹಿತಿಯನ್ನು ಪೆಡೆದು ಕೊಳಗೇರಿ ಪ್ರದೇಶಗಳನ್ನು ಸಮಸ್ಯ ರಹಿತ ಪ್ರದೇಶಗಳಾಗಿ ಮಾಡಲು ಸ್ಲಂ ಸಮಿತಿಯ ಹೋರಾಟಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಸ್ಲಂ ನಿವಾಸಿಗಳು ಕೈ ಜೋಡಿಸಬೇಕೆಂದು ತಿಳಿಸಿದರು. ಸ್ಲಂ ಸಮಿತಿ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ ಮಾತನಾಡಿ ಗದಗ-ಬೆಟಗೇರಿ ನಗರದಲ್ಲಿ ಸುಮಾರು 20ಕ್ಕೊ ಹೆಚ್ಚು ಸ್ಲಂ ಪ್ರದೇಶಗಳಲ್ಲಿ ನಮ್ಮ ಜಿಲ್ಲಾ ಸಮಿತಿಯ ಘಟಕಗಳನ್ನು ರಚನೆ ಮಾಡುವ ಮೂಲಕ ಸ್ಥಳೀಯ ಜನರ ಬೇಡಿಕೆಗಳ ಅನುಗುಣವಾಗಿ ಹೋರಾಟಗಳನ್ನು ರೂಪಿಸಲಾಗುತ್ತಿದೆ. ನಗರದಲ್ಲಿ ಇನ್ನು ಬಾಕಿ ಉಳಿದಿರುವ ಸ್ಲಂಗಳಲ್ಲಿ ನಮ್ಮ ಸಂಘಟನೆಯನ್ನು ವಿಸ್ತರಿಸಿ ನಗರದಲ್ಲಿ ಒಂದು ಸ್ಲಂ ಜನರ ಬಲಿಷ್ಠ ಸಂಘಟನೆಯನ್ನು ಕಟ್ಟಲು ಎಲ್ಲಾ ಸ್ಲಂ ನಿವಾಸಿಗಳು ಸಹಕರಿಸಬೇಕೆಂದು ಹೇಳಿದರು. ಶಾಖೆ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಮುಲ್ಲಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಮಲೇಶಪ್ಪ ಕಲಾಲ, ಮುನ್ನಾ ಅಗಡಿ, ಬಸವರಾಜ ಹೆಬ್ಬಳ್ಳಿ, ಸುಶಿಲಮ್ಮ ಗೊಂದಾರ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು, ಇದೇ ಸಂದರ್ಭದಲ್ಲಿ ರಾಚೋಟೇಶ್ವರ ನಗರದ ಸ್ಲಂ ಪ್ರದೇಶದ ಶಾಖೆ ಸಮಿತಿಯನ್ನು ಪುನಶ್ವೇತನಗೊಳಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ, ಸ್ಥಳೀಯವಾಗಿ ಸ್ಲಂ ಯುವ ಸಮಿತಿಯನ್ನು ಪ್ರತ್ಯೇಕವಾಗಿ ರಚನೆ ಮಾಡಲಾಯಿತು, ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ನಿರೂಪಿಸಿ ವಂದಿಸಿದರು, ಸಭೆಯಲ್ಲಿ ಸ್ಥಳೀಯ ನೂರಾರು ಸ್ಲಂ ನಿವಾಸಿಗಳು ಭಾಗವಹಿಸಿದ್ದರು.