ಸಿರುಗುಪ್ಪ: ಪ್ರಗತಿ ಪರಿಶೀಲನಾ ಸಭೆ ಜೂನ್ 7ಕ್ಕೆ

ಲೋಕದರ್ಶನ ವರದಿ

ಸಿರುಗುಪ್ಪ 02: ಸುರಿದ ಮಳೆ ಅನ್ನದಾತರಲ್ಲಿ ಆತಂಕ ಮುಂಗಾರು ಬಿತ್ತನೆಗೆ ಸಿದ್ಧತೆ ಮಳೆಗಾಗಿ ಎದುರು ನೋಡುತ್ತಿರುವ ರೈತ ಎಂದು ಶಾಸಕ ಎಂ.ಎಸ್ ಸೋಮಲಿಂಗಪ್ಪ ಹೇಳಿದರು. ಸಿರುಗುಪ್ಪ ತಾಲ್ಲೂಕು ಪಂಚಾಯತ್ ಸಭಾ ಭವನದಲ್ಲಿ ತಾಲೂಕು ಪಂಚಾಯತ್ ಕೆಡಿಪಿ ತ್ರೆಮಾಸಿಕ ಪ್ರಗತಿ ಪರಿಶೀಲನೆ ಏರ್ಪಡಿಸಿದ ಸಭೆಯಲ್ಲಿ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಮಾಹಿತಿ ಕೊರತೆ ಅಭಿವೃದ್ಧಿ ಕಾರ್ಯಗಳ ಉತ್ತರಗಳಿಂದ ಅಭಿವೃದ್ಧಿ ನೆನೆಗುದಿಗೆ ಅಸಮಾಧಾನಗೊಂಡ ಶಾಸಕ ಸೋಮಲಿಂಗಪ್ಪ ಜೂನ್ 7ಕ್ಕೆ ಸಭೆ ಮುಂದೂಡಿ ಹೊರ ನಡೆದರು. 

ಸಭೆಯಲ್ಲಿ ಕೈಗೊಂಡ ಚಚರ್ೆಗೆ ಅನುಗುಣವಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ  ಅಧಿಕಾರಿ ಶಿವಪ್ಪ ಸುಬೇದಾರ್ ಅವರಿಗೆ ಪ್ರಶ್ನಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ದೇವಮ್ಮ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೈ. ಶಂಕ್ರಪ್ಪ, ತಹಸೀಲ್ದಾರ್ ದಯಾನಂದ ಎಚ್. ಪಾಟೀಲ್,ಸಮಾಜ ಕಲ್ಯಾಣ ಸಹಾಯಕ ನಿದರ್ೆಶಕರಾದ ಶಾಶೂ ಮೋದಿನ್, ಸಾಕ್ಷರತಾ ಅಬ್ದುಲ್ ನಬಿ, ವಿವಿಧ ಅಧಿಕಾರಿಗಳು ಪಿಡಿಯೊಗಳು ಭಾಗವಹಿಸಿದ್ದರು.