ಸರ್. ಸಿದ್ಧಪ್ಪ ಕಂಬಳಿಯವರ ಮಹತ್ವ ವಿಷಯದ ಕುರಿತು ಉಪನ್ಯಾಸ

ಲೋಕದರ್ಶನ ವರದಿ

ಧಾರವಾಡ 27:  ಗುಣಗ್ರಾಹಿಗಳಾದ ಸರ್. ಸಿದ್ಧಪ್ಪ ಕಂಬಳಿ ಅವರು ಮೇರು ವ್ಯಕ್ತಿತ್ವದ, ಅಪಾರ ವಿದ್ವತ್ ಹೊಂದಿದ, ಹಿಂದುಳಿದ, ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ ಜಾತ್ಯಾತೀತ ಜನಪ್ರಿಯ ವ್ಯಕ್ತಿಯಾಗಿದ್ದರು. ಅವರು ಉತ್ತರ ಕನರ್ಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಧಾರವಾಡ ಕ,ವಿ.ವಿ. ಬಸವೇಶ್ವರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಸಿ.ಎಮ್. ಕುಂದಗೋಳ ಹೇಳಿದರು. ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು, ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ (ದತ್ತಿ ದಾನಿ: ದಿ. ಎಸ್.ಆರ್. ಬೊಮ್ಮಾಯಿಯವರು, ಮಾಜಿ ಮುಖ್ಯಮಂತ್ರಿಗಳು) ಅಂಗವಾಗಿ ಆಯೋಜಿಸಿದ್ದ, 'ಸ್ವಾತಂತ್ರ್ಯ ಪೂರ್ವದ ರಾಜಕೀಯದಲ್ಲಿ ಸರ್. ಸಿದ್ಧಪ್ಪ ಕಂಬಳಿಯವರ ಮಹತ್ವ ವಿಷಯ ಕುರಿತು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. 

ಅಧ್ಯಕ್ಷತೆ ವಹಿಸಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಮಾತನಾಡಿ, ಸರ್. ಸಿದ್ಧಪ್ಪ ಕಂಬಳಿ ಅವರು ಅಂತಿಮ ದಿನಗಳಲ್ಲಿ ಅನುಭವಿಸಿದ ಯಾತನೆ ಮತ್ತು ಸಮಾಜದಿಂದ ಅವರು ನಿರ್ಲಕ್ಷಕ್ಕೆ ಒಳಗಾಗಿದ್ದಕ್ಕೆ ವಿಷಾದವ್ಯಕ್ತಪಡಿಸಿ, ಅವರು ಸಲ್ಲಿಸಿದ ಸೇವೆ, ಕೊಡುಗೆ ಸದಾ ಸ್ಮರಣೀಯವಾಗಿರುವಂತೆ ಮಾಡಲು ಸರಕಾರ 'ಸರ್. ಸಿದ್ಧಪ್ಪ ಕಂಬಳಿ' ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ್ನು ಸ್ಥಾಪಿಸಬೇಕೆಂದು ಮತ್ತು ಅವರ ಭಾವಚಿತ್ರವನ್ನು ಕನರ್ಾಟಕದ ವಿಧಾನಸೌಧ ಹಾಗೂ ದೆಹಲಿಯ ಸಂಸತ್ ಭವನದಲ್ಲಿ ಹಾಕಲು ಆಗ್ರಹಿಸಿದರಲ್ಲದೇ ನಾಡಗೀತೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಸೇರಿಸಲು ಸರಕಾರ ಕ್ರಮಕೈಕೊಳ್ಳಬೇಕಾದ  ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು. 

ಡಾ. ಪಾಪು ನೇತೃತ್ವದಲ್ಲಿ ಸಂಘದ ವತಿಯಿಂದ, ಬೆಳಗಾವಿಗೆ ಆಗಮಿಸಲಿರುವ ಗೌರವಾನ್ವಿತ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಭೇಟಿಯಾಗಿ ಸರ್. ಸಿದ್ಧಪ್ಪ ಕಂಬಳಿ ಅವರ  ಮೇರು ವ್ಯಕ್ತಿತ್ವ ಹಾಗೂ ಕೊಡುಗೆ ಕುರಿತು ಸಮಗ್ರ ಮಾಹಿತಿಯ ಆಂಗ್ಲ ಭಾಷೆಯ ಪುಸ್ತಕವನ್ನು ಅಪರ್ಿಸಲು ಕಾರ್ಯಕ್ರಮದಲ್ಲಿ ನಿರ್ಧರಿಸಲಾಯಿತು. 

ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಇದ್ದರು. ಕಾರ್ಯಕ್ರಮದಲ್ಲಿ ಸರ್. ಸಿದ್ಧಪ್ಪ ಕಂಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. 

ಇದೇ ಸಂದರ್ಭದಲ್ಲಿ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು 1893 ಸಪ್ಟಂಬರ 11 ರಂದು ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ  ಮಾಡಿದ ಭಾಷಣವನ್ನು ಸ್ಮರಿಸಿ, 125 ನೇ ವಷರ್ಾಚರಣೆಯನ್ನು ಆಚರಿಸಲಾಯಿತು. ಈ ಕುರಿತು ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿದರು.  

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಸಪ್ಟಂಬರ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಮೋಹನ ನಾಗಮ್ಮನವರ ಪ್ರಾಸ್ತಾವಿಕ ಮಾತನಾಡಿ, ಶೋಷಿತರ, ಬಡವರ, ಶಿಕ್ಷಣದ ಬಗ್ಗೆ ಸರ್. ಸಿದ್ಧಪ್ಪ ಕಂಬಳಿ ಅವರು ಹೊಂದಿದ ಅಪಾರ ಕಾಳಜಿ ಹಾಗೂ ಕೊಡುಗೆ ರಾಜ್ಯ ಮತ್ತು ರಾಷ್ಟ್ರ ಎಂದೂ ಮರೆಲಾರದಂತದ್ದು. ಅಂಥವರ ಸ್ಮರಣೆ ನಮ್ಮ ಪೀಳಿಗೆಗೆ ಸದಾ ಇರಲು ವಿಧಾನಸೌಧ ಹಾಗೂ ದೆಹಲಿಯ ಸಂಸತ್ ಭವನದಲ್ಲಿ ಅವರ ಭಾವಚಿತ್ರ ಇರಬೇಕು ಎಂದು ಪ್ರಸ್ತಾಪಿಸಿದರು.  ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದಿಸಿದರು. 

ಕಾರ್ಯಕ್ರಮದಲ್ಲಿ, ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ ಹಾಗೂ ಶ್ರೀನಿವಾಸ ವಾಡಪ್ಪಿ, ಸಿ.ಎಸ್. ಪಾಟೀಲ, ಶಿವಶರಣ ಕಲಬಶೆಟ್ಟಿ, ಉಮೇಶ ಕಟಗಿ, ವೀರಣ್ಣ ಒಡ್ಡೀನ,  ಡಾ. ಎಸ್.ವಿ. ಅಯ್ಯನಗೌಡರ, ಶಕುಂತಲಾ ಅಯ್ಯನಗೌಡರ, ವಿದ್ಯಾ ಕುಂದರಗಿ, ಸಿ.ಜಿ. ಜಾಫಣ್ಣವರ, ಮಾರ್ಕಂಡೇಯ ದೊಡಮನಿ, ರಾಮಚಂದ್ರ