ಸಿಂದಗಿ; ಸಂಸ್ಕೃತಿ ಉಳಿಸಲು ಹಿಂದೂತ್ವ ಉಳಿಸಬೇಕು: ಕೇಶವ

ಲೋಕದರ್ಶನ ವರದಿ

ಸಿಂದಗಿ 12: ಹಿಂದೂ ಎಂದರೇ ಸಂಸ್ಕೃತಿ, ಸಂಸ್ಕೃತಿ ಎಂದರೇ ಹಿಂದೂ. ಆದ್ದರಿಂದ ಭಾರತೀಯ ಸಂಸ್ಕೃತಿ ಉಳಿಸಲು ಹಿಂದೂತ್ವ ಉಳಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಕ್ಷತ್ರಿಯ ಸಂಘಟನಾ ಕಾರ್ಯದಶರ್ಿ ಕೇಶವ ಹೆಗಡೆ ಹೇಳಿದರು.

ಪಟ್ಟಣದ ವೇಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾ ಶಾಖೆ ಹಮ್ಮಿಕೊಂಡ ನಡೆದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂತ್ವ ಉಳಿಸಲು ಇಂದಿನ ಪರಸ್ಥಿತಿಯಲ್ಲಿ ನಾವೆಲ್ಲರೂ ಒಂದಾಗಬೇಕು. ಹಿಂದೂ ಸ್ತ್ರೀ ಮೇಲೆ ದೌರ್ಜನ್ಯ ನಡೆಯುತ್ತಿದೆ. ಗೋ ಹತ್ಯೆ ನಡೆಯುತ್ತಿದೆ. ಆದ್ದರಿಂದ ನಾವೆಲ್ಲರೂ ಒಂದಾಗಿ ಹಿಂದೂ ಜಪ ಮಾಡಬೇಕು. ದೇಶ ರಕ್ಷಣೆಯಾಗಬೇಕು. ಹಿಂದೂ ಸ್ತ್ರೀ ರಕ್ಷಣೆಯಾಗಬೇಕು. ಗೋಹತ್ಯೆ ತಡೆಯಬೇಕು ಎಂದು.

ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡಬೇಕು. ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡಿದರೆ, ಮಠಮಾನ್ಯಗಳು ಮಕ್ಕಳಿಗೆ ಸಂಸ್ಕಾರ ನೀಡುತ್ತವೆ. ಆದ್ದರಿಂದ ಮಠಮಾನ್ಯಗಳಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಸಂಸ್ಕಾರವಂತರನ್ನಾಗಿ ಮಾಡಿ. ಹಿಂದೂತ್ವವನ್ನು ಉಳಿಸಲು ನಾವೆಲ್ಲರೂ ಒಂದಾಗೋಣ ಎಂದರು.

ವಿಶ್ವ ಹಿಂದೂ ಪರಿಷತ್ ತಾಲೂಕಾ ಶಾಖೆ ಅಧ್ಯಕ್ಷರನ್ನಾಗಿ ಗೋಲಗೇರಿಯ ಡಾ.ಶರಣಗೌಡ ಬಿರಾದಾರ ಆಯ್ಕೆಯಾದರು. ತಾಲೂಕು ಸಹ ಕಾರ್ಯದರ್ಶಿಯಾಗಿ ಯಮನಪ್ಪ ಚೌಧರಿ ಚಾಂದಕವಠೆ, ರಾಜಕುಮಾರ ಬಮ್ಮನಹಳ್ಳಿ ಸಿಂದಗಿ, ತಾಲ್ಲೂಕು ಭಜರಂಗದಳದ ನೂತನ ಸಂಚಾಲಕರಾಗಿ ಪರುಶರಾಮ ಹಡಪದ, ಸಹ ಸಂಚಾಲಕ ಶ್ರೀಶೈಲ ಬಮ್ಮನಹಳ್ಳಿ, ಸತ್ಸಂಗ ಪ್ರಮುಖ ಬಸವರಾಜ ಬಿರಾದಾರ ಮನ್ನಾಪುರ, ಮಾಧ್ಯಮ ಸಂಪರ್ಕರಾಗಿ ಆರ್.ಎಂ.ಬಡಿಗೇರ, ನಗರ ಕಾರ್ಯದರ್ಶಿ  ನಾಗರಾಜ ಬಿರಾದಾರ, ತಾಲ್ಲೂಕು ಉಪಾಧ್ಯಕ್ಷರಾಗಿ ಗುರು ಬಿರಾದಾರ ವಕೀಲ ನೇಮಕಗೊಂಡರು.