ಸಿಂದಗಿ: ಗುರು ಸುಜ್ಞಾನದ ಬೆಳಕು ನೀಡುವ ದಿವ್ಯ ಚೇತನ

ಲೋಕದರ್ಶನ ವರದಿ

ಸಿಂದಗಿ 16: ಅಜ್ಞಾನದ ಅಂಧಕಾರವನ್ನು ನಿವಾರಿಸಿ ಸುಜ್ಞಾನದ ಬೆಳೆಕನ್ನು ನೀಡುವ ಧಿವ್ಯ ಚೇತನ ಮೂರ್ತಿಯ ಗುರು ಎಂದು ಕಸಾಪ ತಾಲೂಕಾ ಗೌರವ ಕಾರ್ಯದರ್ಶಿ  ಬಸವರಾಜ ಅಗಸರ ಹೇಳಿದರು.

ತಾಲೂಕಿನ ಯಂಕಂಚಿ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡ 44ನೇ ಹುಣ್ಣಿಮೆಯ ಮಾಸಿಕ ಬೆಳದಿಂಗಳ ಕಾರ್ಯಕ್ರಮ ಹಾಗೂ ಗುರುಪೂರ್ಣಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರುವಿನ ಕೃಪೆ ನಮಗೆ ಅಗತ್ಯ. ತಂದೆ-ತಾಯಿ ನಮಗೆ ಜನ್ಮ ನೀಡಿದರೆ ಗುರು ನಮಗೆ ಸಂಸ್ಕಾರ ನೀಡಿ ನಮ್ಮ ಜೀವನ ಪಾವನ ಮಾಡುತ್ತಾನೆ. ಆದ್ದರಿಂದ ನಾವು ತಂದೆ-ತಾಯಿ-ಗುರುವಿಗೆ ಪೂಜ್ಯನೀಯ ಗೌರವ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಟಿಸಿದ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಾ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, ಶಾಲೆಯಲ್ಲಿನ ಗುರುಗಳು ನಮಗೆ ಶಿಕ್ಷಣ ನೀಡಿದರೆ ಮಠದಲ್ಲಿರುವ ಗುರು ನಮಗೆ ಸಂಸ್ಕಾರ ನೀಡುತ್ತಾನೆ. ಆದ್ದರಿಂದ ನಾವು ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಗುರುವಿನ ಆಶೀರ್ವಚನ ಆಲಿಸಿ ಸಂಸ್ಕಾರ ಬೆಳೆಸಿಕೊಳ್ಳೋಣ ಎಂದು ಹೇಳೀದರು.

ಪತ್ರಕರ್ತ ರ್ಚತ್ರಲೇಖಾ ಜೋಗೂರ ಮಾತನಾಡಿ, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ತಂದೆ-ತಾಯಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಚಿಕ್ಕರೂಗಿ ಈರಣ್ಣಶಾಸ್ತ್ರಿ ಅವರು ಮಾತನಾಡಿದರು. ಸಾನಿಧ್ಯ ವಹಿಸಿದ ಗೋಲಗೇರಿ-ಹಂಸಭಾವಿ-ಮಳ್ಳಿ ವೀರಕ್ತಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.  ಕೆಎಂಎಫ್ ನಾಮನಿದೇರ್ಶಕ ಬಸವರಾಜ ಮಾರಲಭಾವಿ, ಮಹಾಂತೇಶ ಹಿರೇಮಠ, ಜಿ.ಆರ್.ಹಿರೇಮಠ, ಮಹಾಂತೇಶ ಅಗಸರ, ಶಿವರಾಜ ಜೋಗೂರ, ಪ್ರಥಮೇಶ ಬಮ್ಮನಜೋಗಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿಖೀತಾ ಕೊಳೂರ ಪ್ರಾಥರ್ಿಸಿದರು. ಶಿಕ್ಷಕ ಚಂದ್ರು ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಶ್ರೀಶೈಲ್ ಬಿರಾದಾರ ನಿರೂಪಿಸಿ ವಂದಿಸಿದರು.