ಸಿಂದಗಿ: ಕಾಲುವೆಗಳಿಗೆ ನೀರು ಬಿಡಲು ಆಗ್ರಹಿಸಿ ರೈತರಿಂದ ಪ್ರತಿಭಟನೆ

ಲೋಕದರ್ಶನ ವರದಿ

ಸಿಂದಗಿ 24: ಕಾಲುವೆಗಳಿಗೆ ನೀರು ಬಿಡಬೇಕು ಎಂದು ಆಗ್ರಹಿಸಿ ತಾಲೂಕಿನ ರೈತರು ಮಂಗಳವಾರ ತಾಲೂಕಿನ ರಾಂಪೂರ ಪಿ.ಎ. ಗ್ರಾಮದಲ್ಲಿನ ಕೆ.ಬಿಜೆಎನ್ಎಲ್ ಮುಖ್ಯ ಇಂಜೀನಿಯರ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಂತರ ಪ್ರತಿಭಟನಾಕಾರರು ಕೆ.ಬಿಜೆಎನ್ಎಲ್ನ ಮುಖ್ಯ ಅಭಿಯಂತರ ಕುಲಕರ್ಣಿ  ಅವರಿಗೆ ಮನವಿ ನೀಡಿದರು.

ಪ್ರತಿಭಟನಾ ನೇತೃತ್ವ ವಹಿಸಿದ ರೈತ ಮುಖಂಡ ಚಂದ್ರಶೇಖರ ದೇವರಡ್ಡಿ ಮಾತನಾಡಿ, ತಾಲೂಕಿನಲ್ಲಿ ಸಕಾಲಕ್ಕೆ ಮಳೆಬಾರದೆ ಇರುವುದರಿಂದ ಬರಗಾಲದ ಛಾಯೆ ಮುಡುತ್ತಿದೆ. ಮಳೆಗಾಲದ ಪ್ರಾರಂಭದಲ್ಲಿಯಾದ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ್ದಾರೆ. ಬೆಳೆ ನಾಟಿಕೆಯಾಗಿದೆ. ಆದರೆ ಮುಂದೆ ಸಕಾಲಕ್ಕೆ ಮಳೆ ಬಾರದೆ ನಾಟಿಕೆಯಾದ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಶೀಘ್ರದಲ್ಲಿ ಕಾಲುವೆಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.

ಕೆಂಬಾವಿಯಿಂದ ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಬಿಡಲು 4 ಮೋಟರ್ ಪಂಪ್ಗಳಿವೆ. ಕಾಲುವೆಯಿಂದ ಸಿಂದಗಿ ತಾಲೂಕಿನಲ್ಲಿನ ಕಾಲುವೆಗಳಿಗೆ ನೀರು ಬರಬೇಕಾದರೆ ಕನಿಷ್ಠ 3 ಮೋಟರ್ ಪಂಪ್ಗಳು ಪ್ರಾರಂಭಿಸಬೇಕು. 

ಮಧ್ಯದಲ್ಲಿ ರಿಪೇರಿಯ ನೆಪ ಒಡ್ಡಿ ಕಾಲುವೆಗೆ ನೀರು ಹರಿಯುವದು ಬಂದ್ ಮಾಡಬಾರದು. ಯೋಜನೆಯ ಕೊನೆಯ ಹಂತದ ವರೆಗೆ ನೀರು ಹರಿಸುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ, ಅಶೋಖ ಅಲ್ಲಾಪೂರ, ಶಂಕರಗೌಡ ಕೊಟಿಖಾನೆ, ಡಾ.ದಸ್ತಗೀರ ಮುಲ್ಲಾ ಅವರು ಮಾತನಾಡಿ, ತಾಲೂಕಿನಲ್ಲಿ ಅನ್ನದಾತ ಸಂಕಷ್ಟದಲ್ಲಿದ್ದಾನೆ. ನೈಸರ್ಗಿಕ ವಿಕೋಪದಿಂದ ಮಳೆ ಬಾರದೆ ಅನ್ನದಾತ ಬೆಳೆದ ಬೆಳೆ ಒಣಗುತ್ತಿವೆ. ಆದ್ದರಿಂದ ಅನ್ನದಾತ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ರೈತರಿಂದ ಮನವಿ ಸ್ವಿಕರಿಸಿದ ಕೆ.ಬಿಜೆಎನ್ಎಲ್ನ ಮುಖ್ಯ ಅಭಿಯಂತರ ಕುಲಕರ್ಣಿ ಅವರು ಮಾತನಾಡಿ, ಇಂದು ಬೆಳಿಗ್ಗೆಯಿಂದಲೇ 3 ಮೋಟಾರ್ ಪಂಪಗಳು ಪ್ರಾರಂಭಿಸಿ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕಾಲುವೆಯ ಕೊನೆಯ ಹಂತದವರೆಗೆ ನೀರು ಹರಿಯುವ ವ್ಯವಸ್ಥೆ ಮಾಡುತ್ತೇವೆ. ಸಲಹಾ ಸಮಿತಿಯ ನಿದರ್ೇಶನದ ಮೇರೆಗೆ ಸಪ್ಟೇಂಬರ ಮೊದಲ ವಾರದ ವರೆಗೆ ನಿರಂತರ ನೀರು ಬಿಡುತ್ತೇವೆ. ನೀರು ಎಲ್ಲಿಯೂ ಪೋಲಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ರೈತರಾದ ಎನ್.ಎಸ್. ಪಾಟೀಲ ಗಣಿಹಾರ, ರವಿಗೌಡ ಪಾಟೀಲ, ಚಿದಾನಂದ ಮಾಳೇಗಾರ, ಸಿದ್ದನಗೌಡ ದೇವರೆಡ್ಡಿ, ಶಾಂತಪ್ಪ ಅಂಬೇವಾಡಿ, ಚೆನ್ನಪ್ಪ ಹೂಗಾರ, ಕುಡ್ಲಪ್ಪ ಚೌರಿ, ಮಲ್ಲನಗೌಡ ವಡ್ಡೋಡಗಿ ಸೇರಿದಂತೆ ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.