ಲೋಕದರ್ಶನ ವರದಿ
ಸಿಂದಗಿ 22: ಪಟ್ಟಣದಲ್ಲಿ ಕಾಯಿಪಲ್ಲೆ, ಹಣ್ಣು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಸ್ಥಳಿಯ ಡಾ.ಎ.ಪಿ.ಜೆ.ಅಬ್ದುಲ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾಗವಾನರು ಹಾಗೂ ಮಾರಾಟಗಾರರು ಹಮ್ಮಿಕೊಂಡಿರುವ ಅನಿರ್ದಿiಷ್ಠಕಾಲ ಧರಣಿ ಸತ್ಯಾಗ್ರಹ ರವಿವಾರ ಎರಡನೆ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಟೀಪ್ಪು ಸುಲ್ತಾನ ವೃತ್ತದಲ್ಲಿ ಈ ಧರಣಿ ಮಾಡಲಾಗುತ್ತಿದ್ದು ಎಂದಿನಂತೆ ಪ್ರತಿ ರವಿವಾರ ನಡೆಯ ಬೇಕಿರುವ ಸಂತೆ ಧರಣಿಯ ಕಾರಣಕ್ಕೆ ಬಂದ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರು ಹಣ್ಣು ಮತ್ತು ತರಕಾರಿಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ಅನೇಕ ಗ್ರಾಮಗಳಿಂದ ನಿತ್ಯ ರೈತರು ತರಕಾರಿಗಳನ್ನು ತಂದು ಮಾರಾಟ ಮಾಡುವುದು ಸಾಮಾನ್ಯ ಆದರೆ ಧರಣಿಯ ಹಿನ್ನಲೆಯಲ್ಲಿ ರೈತರಿಗೂ ಈ ಬೀಸಿ ತಟ್ಟಿದ್ದು ವ್ಯಾಪಾರಕ್ಕೆ ತಂದಿರುವ ತರಕಾರಿ ವಸ್ತುಗಳನ್ನು ಮಾರಾಟ ಮಾಡದೆ ಧರಣಿಗೆ ಬೆಂಬಲ ವ್ಯಕ್ತ ಪಡಿಸಿ ತರಕಾರಿ ವಸ್ತುಗಳನ್ನು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ ತಗೆದುಕೊಂಡು ಹೋದರು.
ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ ಪುರಸಭೆ ಮಾಜಿ ಸದಸ್ಯ ಇಕ್ಬಾಲ ತಲಕಾರಿ ಅವರು ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹಣ್ಣು ಮಾರಾಟ ಮತ್ತು ಟಿಪ್ಪು ಸುಲ್ತಾನ ವೃತ್ತದಿಂದ ಪುರಸಭೆ ಹತ್ತಿರದ ಭೀಮಾಶಂಕರ ಮಠದ ವರೆಗಿನ ರಸ್ತೆ ಬದಿಗಳಲ್ಲಿ ಕಾಯಿಪಲ್ಲೆ ಮಾರಾಟಮಾಡಲಾಗುತ್ತಿದೆ.
ಶೀಘ್ರದಲ್ಲಿ ಸೂಸಜ್ಜಿತ ಕಾಯಿಪಲ್ಲೆ, ಹಣ್ಣು ಮಾರಾಟ ಮಾರುಕಟ್ಟೆ ನಿಮರ್ಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ, ಪಿ.ಕೆ.ಪಿ.ಎಸ್.ಅಧ್ಯಕ್ಷ ಶಾಂತು ಬಿರಾದಾರ ಮಾತನಾಡಿದರು. ಅಧ್ಯಕ್ಷ ಸೈಫನ್ ನಾಟಿಕಾರ, ಉಪಾಧ್ಯಕ್ಷ ಹಾಜಿಗುಲಾಬಸಾಬ, ಬಸೀರಸಾಬ, ಬಂದೇನವಾಜ ಶಾಪೂರ, ರಾಜು ಖೇಡ, ಮಹೀಬುಬಸಾಬ ಅಳ್ಳೋಳ್ಳಿ ಹಮಿದಾ ಅಳ್ಳೊಳ್ಳಿ, ಜೈಫೂನ ಬಮ್ಮನಜೋಗಿ, ಖಾಜಾಮಾ, ಮಾದೇವಿ ಮನ್ನಾಪೂರ, ಗುರುತಾಯಿ ಹಿರೇಮಠ, ಪಾರ್ವತಿ ಬಗಲಿ ಸೇರಿದಂತೆ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟಗಾರರು, ಬಾಗವಾನರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.