ಲೋಕದರ್ಶನ ವರದಿ
ಸಿಂದಗಿ 29: ಕೃಷ್ಣಾ ಭಾಗ್ಯ ಜಲ ನಿಗಮದ ಇಂಡಿ ಮುಖ್ಯ ಕಾಲುವೆ 72 ನೇ ಕಿ.ಮೀ ಕಾಲುವೆಯ ಎಡ ಭಾಗ ಒಡೆದ ಪರಿಣಾಮ ಹಿಕ್ಕಣಗುತ್ತಿ, ಕಲಹಳ್ಳಿ, ಕೋರಳ್ಳಿ ವಿಭೂತಿಹಳ್ಳಿ, ರಾಂಪೂರ ಗ್ರಾಮಗಳ ಸುಮಾರು 1000 ಎಕರೆಕ್ಕೂ ಹೆಚ್ಚು ಜಮೀನು ಜಲಾವೃತವಾಗಿ ಬೆಳೆಹಾನಿಯಾದ ಘಟನೆ ರವಿವಾರ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿದ ಮಾಜಿ ಶಾಸಕ ರಮೇಶ ಭೂಸನೂರ ಅವರು ಪರಸ್ಥಿತಿ ಪರಶೀಲನೆ ಮಾಡಿ ರೈತರೊಂದಿಗೆ ಮಾತನಮಾಡಿ, ಶೀತಲಗೊಂಡ ಕಾಳುವೆ ಒಡೆದು ಹರಿಯುವ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ಬೆಳೆಹಾನಿಯಾಗಿದೆ. ರೈತರು ಆತಂಕ ಪಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಹಾನಿಗೊಳಗಾದ ರೈತರು ಆತಂಕ ಪಡಬೇಕಾಗಿಲ್ಲ. ಈಗಾಗಲೇ ಕಬಿಜೆಎನ್ಎಲ್ ಎಂ.ಡಿ. ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿಯ ಪರಸ್ಥಿ ಬಗ್ಗೆ ಹೇಳಿದ್ದೇನೆ. ಸುಮಾರು ಸಾವಿರಾರು ಎಕರೆ ಜಮೀನಿಗೆ ಕಾಲುವೆ ನೀರು ಹರಿದು ಬಂದಿದೆ. ಇದರಿಂದ ರೈತರು ಬೆಳೆದ ತೊಗರಿ, ಹತ್ತಿ, ಕಬ್ಬು, ದ್ರಾಕ್ಷಿ ಬೆಳೆ ಹಾನಿಯಾಗಿದೆ. ಕೂಡಲೇ ಹಾನಿಯಾದ ವರದಿಯನ್ನು ಸಲ್ಲಿಸಬೇಕು ಶಿಘ್ರದಲ್ಲಿ ಪರಿಹಾರ ನೀಡುವ ಕ್ರಮ ಕೈಕೊಳ್ಳಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.
ಲಗೊಂಡ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಲಾಗಿದೆ. ಅವರು ನಿರ್ಲಕ್ಷ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳಬೇಕು. ಸಾಲ ಮಾಡಿ ಬೆಳೆದ ದ್ರಾಕ್ಷಿ, ಕಬ್ಬು, ಹತ್ತಿ, ತೊಗರೆ ಬೆಳೆಗಳು ಅಧಿಕಾರಿಗಳ ನಿರ್ಲಕ್ಷದಿಂದ ಕಾಲುವೆ ಒಡೆದು ಕಾಲುವೆ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ನಮಗೆ ಸಾಕಷ್ಟು ಹಾನಿಯಾಗಿದೆ. ಶಿಘ್ರದಲ್ಲಿ ಹಾನಿಗೊಳಗಾದ ಪ್ರದೇಶವನ್ನು ಸವರ್ೆ ಮಾಡಿ ಪರಿಹಾರ ನೀಡಬೇಕು ಎಂದು ಹಾಣಿಗೊಳಗಾದ ರೈತರಾದ ರಾಜುಗೌಡ ಪಾಟೀಲ, ಸರ್ವಜ್ಞ ಹೀರೆಮಠ, ವಿವೇಕಾನಂದ ಪಾಟೀಲ, ಈರಣ್ಣ ಬಿರಾದಾರ, ಸಂಗಣ್ಣ ಮಿರಗಿ, ಮಲ್ಲಯ್ಯ ಹೀರೆಮಠ ಸೇರಿದಂತೆ ಇನ್ನುಳಿದ ರೈತರು ಆಗ್ರಹ ಪಡೆಸಿದ್ದಾರೆ.