ಸಿಂದಗಿ: ನಿತ್ಯ ಯೋಗದಿಂದ ಆರೋಗ್ಯ ವೃದ್ಧಿ: ಡಾ.ಭೂಸಗೊಂಡ

ಲೋಕದರ್ಶನ ವರದಿ

ಸಿಂದಗಿ 16: ಯೋಗದಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ನಿತ್ಯ ಯೋಗ ಮಾಡೋಣ ಎಂದು ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ, ರಾಜ್ಯ ಪ್ರಶಸ್ತಿ ಪುರಸ್ಕತ ಚಿತ್ರಕಲಾ ಶಿಕ್ಷಕ, ಯೋಗಗುರು ಡಾ.ಜಿ.ಎಸ್.ಭೂಸಗೊಂಡ ಹೇಳಿದರು.

ತಾಲೂಕಿನ ಚಾಂದಕವಟೆ ಗ್ರಾಮದ ಶ್ರೀ ಪರಮಾನಂದ ಪ್ರೌಢಶಾಲೆಯ ಆವರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಯೋಗ ಶಿಬಿರದಲ್ಲಿ ತರಬೇತಿ ನೀಡಿ ಅವರು ಮಾತನಾಡಿದರು.

ಪ್ರತಿದಿನ ಯೋಗ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಲು ಸಾಧ್ಯ. ವಿದ್ಯಾಥರ್ಿಗಳಿಗೆ ಜ್ಞಾಪಕಶಕ್ತಿ ಹೆಚ್ಚುತ್ತದೆ. ಆದ್ದರಿಂದ ಮಕ್ಕಳಿಂದ ವೃದ್ದರೂ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ಶಿಭಿರಾರ್ಥಿಗಳಾದ ರೂಪಾ ಬಿರಾದಾರ, ಅನೀಲ ಮ್ಯಾಕೇರಿ, ಸುನೀಲ ಮ್ಯಾಕೇರಿ, ಶಿವಾನಂದ ಕಂಟಿಗೊಂಡ ಮಾತನಾಡಿ, ಡಾ.ಜಿ.ಎಸ್.ಭೂಸಗೊಂಡ ಅವರ ಜಿ.ಎಸ್.ಭೂಸಗೊಂಡ 104ನೇ ಉಚಿತ ಯೋಗ ಶಿಬಿರವಾಗಿದೆ. ಒಂದು ವಾರದ ಶಿಬಿರದಲ್ಲಿ ಅವರು ವಿವಿಧ ಯೋಗಾಶನಗಳನ್ನು ಹೆಳಿಕೊಡುವ ಮೂಲಕ ನಮ್ಮ ಆರೋಗ್ಯದ ಹಿತ ಕಾಪಾಡಿದ್ದಾರೆ. ಅವರು ಇನ್ನು ಹೆಚ್ಚು ಉಚಿತ ಯೋಗ ಶಿಬಿರಗನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಆರೋಗ್ಯ ಕಾಪಾಡಬೇಕು. ಅವರ ಉಚಿತ ಸೇವೆ ಇತರರಿಗೂ ಮಾದರಿಯಾಗಿರಲಿ.

ಗ್ರಾಮಸ್ಥರಾದ ಮಹಾಂತಯ್ಯ ಹಿರೇಮಠ, ಅರವಿಂದ ಬಿರಾದಾರ, ಮಾಳಪ್ಪ ಸೋನ್ನದ, ಶಂಕರಗೌಡ ಬಿರಾದಾರ, ಮುತ್ತು ತಡಲಗಿ ಅವರು ಮಾತನಾಡಿ, ಡಾ.ಜಿ.ಎಸ್.ಭೂಸಗೊಂಡ ಅವರು ವಿವಿದೇಡಿಯಲ್ಲಿ 104 ಉಚಿತ ಯೋಗ ಶಿಬಿರಗಳನ್ನು ಹಮ್ಮಿಕೊಂಡಿರುವುದು ಶ್ಲಾಘನಿಯ ಕಾರ್ಯ. ಅವರು ಇನ್ನೂ ಹೆಚ್ಚು ಹಳ್ಳಿ ಹಳ್ಳಿಗಳಲ್ಲಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳುವ ಮೂಲಕ ಅಲ್ಲಿಯ ಜನರಿಗೆ ಯೋಗದ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಕ ಕೆ.ಆರ್.ಕಂಟಿಗೊಂಡ, ಎಸ್.ಎನ್.ಕಕ್ಕಳಮೇಲಿ, ಎಸ್.ಎಂ.ಕಂಟಿಗೊಂಡ, ಪ್ರೌಢಶಾಲಾ ವಿದ್ಯಾಥರ್ಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಒಟ್ಟು 300ಕ್ಕು ಹೆಚ್ಚು ಜನರು ಯೋಗ ಶಿಬಿರದಲ್ಲಿ ಭಾಗವಹಿಸಿದರು.