ಸಿಂದಗಿ: ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಪಡೆದುಕೊಳ್ಳಬೇಕು: ಸುಂಕದ

ಲೋಕದರ್ಶನ ವರದಿ

ಸಿಂದಗಿ 25: ರೈತರಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವು ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿವೆ. ಅವುಗಳ ಸದುಪಯೋಗಗಳನ್ನು ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಕೆ.ಎಸ್.ಸುಂಕದ ಹೇಳಿದರು.

ತಾಲೂಕಿನ ಮೋಟರಗಿ ಗ್ರಾಮದಲ್ಲಿನ ಕೃಷಿ ಕೇಂದ್ರದಲ್ಲಿ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಅವರು ರೈತರಿಗೆ ಸಲಹೆ ನೀಡಿ ಮಾತನಾಡಿದರು.

ಒಂದು ಖತೆದಾರರಿಗೆ 5 ಪಾಕೀಟ ತೊಗರಿ ಬೀಜವನ್ನು ನೀಡಲಾಗುವುದು ಮತ್ತು ನಮ್ಮ ಕೃಷಿ ಕೇಂದ್ರಕ್ಕೆ ಸಂಭಂದಿಸಿ ಹಳ್ಳಿಗಳಾದ ಕುಳೇಕುಮಟಗಿ, ಬಗಲೂರ, ಶಿರಸಗಿ, ಕಕ್ಕಳಮೇಲಿ, ಹಾವಳಗಿ, ಗಬಸಾವಳಗಿ, ಭಂಟನೂರ ಹಂಚಿನಾಳ ಸೇರಿದಂತೆ ಸುಮಾರು 25 ಹಳ್ಳಿಗಳ ರೈತರು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದರು.

ಈ ಸಂದರ್ಭದಲ್ಲಿ ರೈತರಾದ ಚಿನ್ನಪ್ಪ ಕುಂಬಾರ, ಬುಡ್ಡಾ ಶಿರಶ್ಯಾಡ, ಬೂತಾಳಿ ಖಾನಾಪೂರ, ರಸೂಲ ಭಾಸಗಿ, ಸೈಬಣ್ಣ ಕೆರಿಗೊಂಡ, ಸಿದ್ದಪ್ಪ ಚೌಡಾಪೂರ, ಶ್ರೀಶೈಲ ಹಡಪದ, ಮಲ್ಲಪ್ಪ ಶಿರಸಗಿ, ಪ್ರಭು ನಡವಿನಕೇರಿ ಸುನೀಲ ಸಿಂಗೆ, ಬೀಮಣ್ಣ ಹೋಳಿ, ಸುಭಾಸ ನಗನೂರ ಸೇರಿದಂತ ವಿವಿಧ ಹಳ್ಳಿಯಿಂದ ರೈತರು ಭಾಗವಹಿಸಿದ್ದರು.