ಸಿಂದಗಿ: ಪತ್ರಿಕಾರಂಗ, ವೈದ್ಯಕೀಯರಂಗ ಸಮಾಜದ ಎರಡು ಕಣ್ಣುಗಳಿದಂತೆ: ರಾಜಯೋಗಿನಿ ಸರೋಜಾ

ಲೋಕದರ್ಶನ ವರದಿ

ಸಿಂದಗಿ 05: ಪತ್ರಿಕಾರಂಗ ಮತ್ತು ವೈದಕೀಯ ರಂಗ ಇವೆರಡು ಸಮಾಜದ ಎರಡು ಕಣ್ಣುಗಳಿದಂತೆ ಕಾರಣ ಇಂದಿನ ಒತ್ತಡದ ಜಗತ್ತಿನಲ್ಲಿ ಪತ್ರಕರ್ತರು ಮತ್ತು ವೈದ್ಯರು ಕಾರ್ಯಚಟುವಟಿಕೆಯಲ್ಲಿ ತೊಡಗಬೇಕಾದರೆ ಶ್ರದ್ಧೆ ಮತ್ತು ಶಾಂತಿ ಹಾಗೂ ದೈರ್ಯವನ್ನು ಇಟ್ಟುಕೊಂಡು ಪರಮಾತ್ಮನನ್ನು ಮನದಲ್ಲಿ ನೆನೆದು ಕಾರ್ಯಪ್ರವೃತ್ತರಾಗಬೇಕು. ಎಂದು ವಿಜಯಪೂರದ ಜ್ಞಾನಗಂಗಾ ಭವನದ ರಾಜಯೋಗಿನಿ ಸರೋಜಾ ಅಕ್ಕನವರು ಸಲಹೆ ನೀಡಿದರು. 

         ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಓ ಶಾಂತಿ ನಗರದ ಜ್ಞಾನ ಜ್ಯೋತಿ ಭವನದಲ್ಲಿ  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ರಾಷ್ರ್ಟೀಯ ವೈಧ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವೈದ್ಯರು ಹಣ ಗಳಿಕೆಗೆ ಸೆವೆ ಮಾಡದೇ ಸೆವಾಮನೋಭಾವದಿಂದ ಚಿಕಿತ್ಸೆ ಮಾಡಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಶಾಂತೂ ಹಿರೇಮಠ ಮಾತನಾಡಿ, ವೈದಲೀಯ ಮತ್ತು ಪತ್ರಿಕಾ ಮಾದ್ಯಮವು ಇವೆರಡು ಸಮಾಜಕ್ಕೆ ಪೂರಕವಾಗುವ ಕಂಬಗಳಿಂದಂತೆ ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ಸಮಾಜದಲ್ಲಿನ ನ್ಯೂತ್ಯತೆಗಳನ್ನು ಬಹಿರಂಗ ಪಡಿಸಿ ಸಮಾಜಕ್ಕೆ ತಿಳಿಸುವದ್ದಾಗಿದೆ ಹೊರತು ಓರೆಕೋರೆಗಳನ್ನು ತಿದ್ದುವದಲ್ಲ ಎಂದರು.  

        ಡಾ.ಶಾರದಾ ನಾಡಗೌಡ ಮಾತನಾಡಿ, ವೈದಕೀಯ ವೃತ್ತಿ ಪ್ರಾರಂಭಮಾಡುವ ಮುನ್ನ ಪ್ರಮಾಣ ಮಾಡಿದಂತೆ ರೋಗ ಬಂದ ಮೇಲೆ ಉಪಚಾರ ಮಾಡುವುದು ಅದು ವೃತ್ತಿಯಲ್ಲ ರೋಗ ಬರದಂತೆ ಜಾಗೃತಿ ಮೂಡಿಸುವುದೇ ವೃತ್ತಿ ಪಾವಿತ್ರತೆ ಕಾಪಾಡಿದಂತೆ. ದುಡ್ಡು ಎಲ್ಲರಿಗೂ ಅವಶ್ಯಕ ಆದರೆ ಅದೇ ಜೀವನವಾಗಬಾರದು ಎಂದು ಹೇಳಿದ ಅವರು ರೋಗಿಗಳು ಡಾಕ್ಟರೆ ದೇವರು ಎಂದು ಬಂದಾಗ  ವೈದ್ಯರು ದೈವತ್ವದ ಕಡೆಗೆ ಒಯ್ದು ಉಪಚಾರ ನೀಡಬೇಕು ಎಂದು ತಿಳಿಸಿದರು

       ಸಿ.ಎಂ.ಮನಗೂಳಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಬಿ. ಎನ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅದ್ಯಕ್ಷ ಆನಂದ ಶಾಬಾದಿ ಕಾರ್ಯದರ್ಶಿ  ಮಲ್ಲಿಕಾರ್ಜುನ  ಅಲ್ಲಪುರ, ನಿಂಗರಾಜ ಅತನೂರ, ಸಿದ್ದಲಿಂಗ ಕಿಣಗಿ, ಪಂಡಿತ ಯಂಪೂರೆ, ಅಂಬರೀಷ ಸುಣಗಾರ, ಪ್ರಕಾಶ ಬಡಿಗೇರ, ಎಸ್.ಜಿ.ಹಿರೇಮಠ, ಶಂಕರ ಮಳ್ಳಿ, ತಾನಾಜಿ, ಶಿವರಾಜ ತೇಲಿ, ಮುರಗೇಶ ಹಿಟ್ಟಿ, ಡಾ. ಚಂದ್ರೇಶಖರ ಹಿರೇಗೌಡ, ಡಾ.ಪ್ರಕಾಶ ಉಪ್ಪಿನ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

      ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕನವರು ತಿಲಕ ಮತ್ತು ಪುಷ್ಪ ವಿತರಿಸಿದರು. ಪ್ರೊ. ಬಿ.ಜಿ.ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಎಸ್ ಎಸ್ ಬುಳ್ಳಾ ವಂದಿಸಿದರು.