ಕೆಲಸದಲ್ಲಿ ತೋರಿದ ಪ್ರಾಮಾಣಿಕ ಪ್ರೇರಣೆ ಸಾಧನೆಯೇ ದೊಡ್ಡದಾಗುತ್ತದೆ : ಇಓ ಕುಮಾರ
ಶಗ್ಗಾವಿ 27: ಉದ್ಯೋಗವಿಲ್ಲದಾಗ ಅನುಭವಿಸಿದ ಮಾನಶಿಕ ವೇದನೆಗಿಂತ, ಸಾರ್ವಜನಿಕ ವಲಯದಲ್ಲಿ ತೆರಿಗೆ ವಸೂಲಿ ಸಂದರ್ಭದಲ್ಲಿ ಗ್ರಾ.ಪಂ.ಸಿಬ್ಬಂದಿ ಅನುಭವಿಸಿದ ಕಷ್ಟವೇನು ದೊಡ್ಡದಲ್ಲ. ಕೆಲಸದಲ್ಲಿ ತೋರಿದ ಪ್ರಾಮಾಣಿಕ ಪ್ರೇರಣೆ ಸಾಧನೆಯೇ ದೊಡ್ಡದಾಗುತ್ತದೆ. ಎಂದು ತಾಲೂಕು ಪಂಚಾಯತಿ ಇಓ ಕುಮಾರ ಮಣ್ಣವಡ್ಡರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿನ ವಿವಿದ್ದೋದೇಶ ಹೆಚ್ಚು ತೆರಿಗೆ ವಸೂಲಿ ಸಾಧನೆ ಮಾಡಿದ ಶಿಬ್ಬಂದಿಗಳ ಪ್ರೇರಣೆಗಾಗಿ ಸನ್ಮಾನ ಅಭಿನಂಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು
ಒಂದು ವಾರದ ಅಭಿಯಾನ ಕಾರ್ಯಕ್ರಮದಲ್ಲಿ ತಾಲೂಕಿನ ಹಲವಾರು ಗ್ರಾಮ ಪಂಚಾಯತಿಗಳು ರಾಜಸ್ವ ಸಂಗ್ರಹಿಸುವಲ್ಲಿ ಸಾಧನೆ ಮೆರೆದಿವೆ. ಆಡಳಿತದಲ್ಲಿ ಬದಲಾವಣೆ, ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ವಸೂಲಿಯಲ್ಲಿ ಸಾಕಷ್ಟು ಹಿಂದುಳಿದಿದ್ದವರೂ ಅಭಿವೃದ್ಧಿ ಕ್ರಮವಹಿಸಿದ್ದಾರೆ. ಸಾರ್ವತ್ರಿಕವಲಯಗಳ ವಿರೋಧಗಳ ನಡುವೆಯೂ ಕಟ್ಟುನಿಟ್ಟಿನ ಕ್ರಮವಹಿಸಿದ್ದಕ್ಕೆ ಹಿರಿಯ ಅಧಿಕಾರಿಗಳಿಂದ ಅಭಿನಂಧನೆಯೂ ಸಿಕ್ಕಿದೆ. ಎಂದ ಅವರು ಸುಧಾರಣಾ ಆಢಳಿತ ತರಬೇಕು. ತೆರಿಗೆ ವಸೂಲಾತಿ ಕ್ರಮ ಮುಂದುವರೆಸಿ ಎಂದು ಸಲಹೆ ನೀಡಿದ ಅವರು ಜಂಟಿ ಖಾತೆ, ಸರಿಯಾದ ಆಸ್ತಿ ಅಳತೆ ಮಾಪನಗಳು ಅಲಭ್ಯತೆ, ಕೆಲ ತಾಂತ್ರಿಕ ಅಡಚಣೆಗಳಿದ್ದಲ್ಲಿ ಮೇಲಾಧಿಕಾರಿಗಳ ಸಲಹೆ ಪಡೆಯಿರಿ. ತೆರಿಗೆ ವ್ಯಾಪ್ತಿಯ ವ್ಯಾಪಾರ ಉದ್ದೇಶಿತ ವಾಣಿಜ್ಯ ವಹಿವಾಟುಗಳಲ್ಲಿ ದಾಖಲಿಕರಣ ಕಡ್ಡಾಯಗೊಳಿಸಿ ಎಂದರು.
ಸಹಾಯಕ ನಿರ್ದೇಶಕ ಪ್ರಕಾಶ ಓಂಧಕರ ಮಾತನಾಡಿ, ತಾಲೂಕಿನಲ್ಲಿ ಗ್ರಾಪಂಗಳಲ್ಲಿ ತೆರಿಗೆ ವಸೂಲಿ ಹುದ್ದೇಗಳೇ ಖಾಲಿ ಇವೆ.ಪಂಚಾಯತಿ ಶಿಬ್ಬಂಧಿಗಳೊಂದಿಗೆ ಸ್ವತಃ ಅಭಿವೃದ್ಧಿ ಅಧಿಕಾರಿಗಳೇ ಪೀಲ್ಡಿಗಿಳಿದಿದ್ದಾರೆ. ಸಾಧನೆ ಮಾಡಿದವರಲ್ಲಿ ಮಡ್ಲಿ ಹಾಗೂ ಎನ್.ಎಂ ತಡಸ್.ಪಂಚಾಯತಿಗಳು.ಮುಂಚೂಣಿಯಲ್ಲಿವೆ.ಪ್ರತಿಶತ 120ಅ ರಷ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ ವಿವಿಧ ಪಂಚಾಯತಿಗಳೀಗೂ ಟಾಸ್ಕ ನೀಡಲಾಗಿದೆ. ಎಂದರು.
ಮಡ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಂತೋಷ ಅಲಗೂರು. ಎನ್.ಎಂ ತಡಸ್ ಗ್ರಾಪಂ ಸುಮಾ ನಾಡರ್. ಹುಲಗೂರು ಗ್ರಾಪಂನ ಬಿಲ್ ಕಲೆಕ್ಟರ್ ಅಜ್ಜಪ್ಪ ತೆರಿಗೆ ವಸೂಲಿ ಸಾಧನೆಯ ಬಗ್ಗೆ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎ.ಡಿ. ನೃಪತಿ ಬೂಸರೆಡ್ಡಿ.ಮ್ಯಾನೇಜರ್ ಸುರೇಶ ತಗ್ಗಿಹಳ್ಳಿ, ಪಿಡಿಓ ಚೇತನಾ, ಶಿವಾನಂದ ಸಣ್ಣಕ್ಕಿ. ಅಕ್ಷಯ. ಮಾದೇವ ಹೂಗಾರ. ಮಾರುತಿ ಕುಂದರಗಿ. ವಿವಿಧ ಶಿಬ್ಬಂಧಿಗಳಿದ್ದರು. 100ಅ ರಷ್ಟು ನಿಗಧಿತ ಸಾಧನೆ ಮಾಡಿದ ಚಂದಾಪೂರ, ನಾರಾಯಣಪೂರ. ಹಳೆಬಂಕಾಪೂರ. ಎನ್.ಎಂ ತಡಸ್. ಮಡ್ಲಿ ಗ್ರಾಪಂ ಹುಲಗೂರು ಕೋನನಕೇರಿ ಪಿಡಿಓ, ಬಿಲ್. ಕಲೆಕ್ಟರ್. ಹಾಗೂ ಇತರರನ್ನು ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು