26 ರಂದು ಹುಲ್ಲೋಳಿ ಅರಿಹಂತ ಸೌಹಾರ್ದ ಬ್ಯಾಂಕ್‌ನ ಬೆಳ್ಳಿ ಹಬ್ಬ ಹಿರಿಯ ನ್ಯಾಯವಾದಿ, ನಿರ್ದೇಶಕ ಪಿ.ಆರ್.ಚೌಗಲಾ ಮಾಹಿತಿ
ಹುಕ್ಕೇರಿ : ಗ್ರಾಮೀಣ ಭಾಗದ ಬಡಜನರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ, ಚಿಕ್ಕ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಅರಿಹಂತ ಸೌಹಾರ್ದ ಸಹಕಾರಿ ಸಂಘವು 25 ವರ್ಷ ಪೂರೈಸಿದ ಪ್ರಯುಕ್ತ ಇದೇ ತಿಂಗಳು ಡಿ.26 ರಂದು ಬೆಳಗ್ಗೆ 10.30ಕ್ಕೆ ಬೆಳ್ಳಿ ಹಬ್ಬದ ಮಹೋತ್ಸವ ಆಯೋಜಿಸಲಾಗಿದೆ ಎಂದು ಹಿರಿಯ ನ್ಯಾಯವಾದಿಯೂ ಆದ ಬ್ಯಾಂಕಿನ ನಿರ್ದೇಶಕ ಪಿ.ಆರ್.ಚೌಗಲಾ ಹೇಳಿದರು.
ಬ್ಯಾಂಕ್‌ನ ಸಭಾಭವನದಲ್ಲಿ ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರ ಒಡನಾಡಿಯಾಗಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್ ಸುದೀರ್ಘ 25 ವಸಂತಗಳಲ್ಲಿ ವಿವಿಧ ಸಮಾಜಮುಖಿ ಮತ್ತು ಸಾರ್ಥಕ ಕೆಲಸಗಳನ್ನು ಮಾಡುವ ಮೂಲಕ ಈ ಭಾಗದ ಆರ್ಥಿಕ ಚಟುವಟಿಕೆಗೆ ತನ್ನದೇಯಾದ ಬಲ ತುಂಬಿದೆ. ಇದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿ ಹೆಮ್ಮರವಾಗಿ ಬೆಳೆದಿದೆ ಎಂದರು.
ಬೆಳ್ಳಿ ಹಬ್ಬ ಸಂಭ್ರಮದ ಸವಿನೆನಪಿಗಾಗಿ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಹಾಗೂ ಕ್ಯಾಶ್ ಬ್ಯಾಗ್ ವಿತರಿಸಲಾಗುವುದು. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರೆ್ಣ, ಕಾನೂನು ಕಾರ್ಯಾಗಾರ, ಕನ್ನಡ ಸಾಹಿತ್ಯ ಸಂಭ್ರಮ, ಗ್ರಂಥ ವಿತರಣೆ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಬೆಳ್ಳಿ ಹಬ್ಬವನ್ನು ಸ್ಮರಣೀಯಗೊಳಿಸಲು ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು ಯಶಸ್ವಿಗೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕ ಸದಸ್ಯರು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಧ್ಯಕ್ಷ ಬಿ.ಬಿ.ಚೌಗಲಾ ಮಾತನಾಡಿ, ಅರಿಹಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆವರಣದಲ್ಲಿ ಬೆಳ್ಳಿ ಹಬ್ಬದ ಮಹೋತ್ಸವ ಆಯೋಜಿಸಿದ್ದು ನಾಂದಣಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಶ್ರವಣಬೆಳಗೊಳ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಸಂಸದ ರಮೇಶ ಕತ್ತಿ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಬೆಳ್ಳಿ ಹಬ್ಬದ ಮಹೋತ್ಸವದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ ಅರಿಹಂತ ಸಭಾಭವನದ ಅಡಿಗಲ್ಲು ನೆರವೇರಿಸುವರು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಬೆಳ್ಳಿ ನಾಣ್ಯ ವಿತರಿಸುವರು. ಶಾಸಕ ನಿಖಿಲ್ ಕತ್ತಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಜಗದೀಶ ಕವಟಗಿಮಠ, ಉತ್ತಮ ಪಾಟೀಲ, ವಿನೋದ ದೊಡ್ಡಣ್ಣವರ, ಪಾರೀಸ ಉಗಾರೆ, ಸಹಕಾರ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಅಧ್ಯಕ್ಷ ಬಿ.ಬಿ.ಚೌಗಲಾ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ರಾಮಣ್ಣಾ ಗೋಟೂರಿ, ಜಿನ್ನಪ್ಪಾ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಬಾಬು ಅಕ್ಕಿವಾಟೆ, ಶೃತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಅರುಣ ಚೌಗಲಾ, ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.
ಫೋಟೊ ಶೀರ್ಷಿಕೆ : 22ಎಚ್‌ಯುಕೆ-2
ಹುಕ್ಕೇರಿ ತಾಲೂಕಿನ ಹುಲ್ಲೋಳಿಯಲ್ಲಿ ರವಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಅರಿಹಂತ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ ಅವರು ಬೆಳ್ಳಿ ಹಬ್ಬದ ಮಾಹಿತಿ ನೀಡಿದರು.