ಸಿದ್ರಾಮಯ್ಯನವರ ನೇತ್ರತ್ವದ ಕಾಂಗ್ರೇಸ್: ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸುಮಾರು 100 ಕೋಟಿ ಅನುದಾನ ನೀಡಿದೆ
ಮುದ್ದೇಬಿಹಾಳ 08: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತ್ರತ್ವದ ಕಾಂಗ್ರೇಸ್ ಉತ್ತಮ ಜನಪರ ಆಡಳಿತ ನೀಡುವ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದೆ ಅದರಂತೆ ನಮ್ಮ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಈಗಾಗಲೇ ಸುಮಾರು 100 ಕೋಟಿಗಳ ಅನುದಾನ ನೀಡಿದೆ ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಅನುದಾನ ಬಿಡುಗಡೆಗೊಳಿಸಲು ಸದಾ ಸಿದ್ಧವಿದೆ ಕಾರಣ ಅಭಿವೃದ್ಧಿಯ ವಿಷಯದಲ್ಲಿ ಯಾರೂ ಕೂಡ ರಾಜಕಾರಣ ಮಾಡದೇ ಸಹಕರಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಪುರಸಭೆ ಮುಂಬಾಗದಲ್ಲಿ ಜಿಲ್ಲಾಢಳಿತ ಹಾಗೂ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಕಾರ್ಯಾಲಯ ಮುದ್ದೇಬಿಹಾಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಆಮೃತ 2.0 ಯೋಜನೆಯಡಿ ಪಟ್ಟಣದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಸರಬರಾಜ ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ಪಟ್ಟಣದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಅಂದಿನ ದೇಶಮುಖ ಅವರು ಶಾಶ್ವತ ಕುಡಿಯುವ ನೀರು ಒದಗಿಸುವ ಕನಸು ಕಂಡು ಅಂದಿನ ಸರಕಾರದ ಅವಧಿಯಲ್ಲಿ ಯೋಜನೆ ರೂಪಿಸಿದರು. ಹಣಕಾಸಿನ ತೊಂದರೆಯಿಂದ ಸಂಪೂರ್ಣ ಮಾಡಲು ಸಾಧ್ಯವಾಗಲಿಲ್ಲ ಮುಂದೆ ಕೆಲವೇ ದಿನಗಳಲ್ಲಿ ಎಸ್ ಬಂಗಾರ್ಪನವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಕಾಂಗ್ರೇಸ್ ಸರಕಾರ ಇನ್ನಷ್ಟು ಹೆಚ್ಚಿನ ಅನುದಾನ ತರುವ ಮೂಲಕ ಇಲ್ಲಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಯಿತು. ಆದರೇ ಕೆಲವರು ಮಾಹಿತಿ ಕೊರತೆಯಿಂದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಜನರು ಸತ್ಯವನ್ನು ಅರ್ಥೈಸಿಕೊಳ್ಳಬೇಕು ಎಂದರು.
ಇತ್ತಿಚಿಗೆ ಮುದ್ದೇಬಿಹಾಳ ಪಟ್ಟಣ ವೇಗವಾಗಿ ಬ್ರಹದಾಕಾರವಾಗಿ ಬೆಳೆಯುತ್ತಿದೆ ಜನ ಸಂದಣಿ ವ್ಯಾಪಾರ ವಹಿವಾಟು ದಿನದಿನಕ್ಕೆ ಹೆಚ್ಚಾಗುತ್ತಿದೆ ಈ ಹಿನ್ನೇಲೆ ಪಟ್ಟಣದ ಸುತ್ತಲಿನ ಶಿರೋಳ, ಹಡಲಗೇರಿ, ಬಿದರಕುಂದಿ, ಕುಂಟೋಜಿ ಸೇರಿದಂತೆ ಅನೇಕ ಗ್ರಾಮಗಳನ್ನು ಜನಸಂಖ್ಯಾನುಸಾರ ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಗೆ ಸೇರೆ್ಡ ಮಾಡುವ ಮೂಲಕ ನಗರಸಭೆ ಮಾಡಲು ಈ ಗಾಗಲೇ ಸರಕಾರದ ಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ ಇದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ದ್ವೀಗುಣಗೊಳ್ಳುವುದರ ಜತೆಗೆ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಸುಮಾರು 42 ಕೋಟಿ ರೂಗಳ ವೆಚ್ಚದಲ್ಲಿ ಪಟ್ಟಣದ ಜನರಿಗೆ ಸಮರ್ಕ ಕುಡಿಯುವ ನೀರು ಒದಗಿಸಲು ಮುಖ್ಯಮಂತ್ರಿಗಳು ಮುದ್ದೇಬಿಹಾಳಕ್ಕೆ ಬಂದಾಗ ಆಗ ಈ ಯೋಜನೆಯನ್ನು ಉದ್ಘಾಟಿಸಿದ್ದರು. ಆದರೇ ಜನರಿಗೆ ಗೊತ್ತಾಗಿರಿಲ್ಲ ಸಧ್ಯ ಸಾಂಕೇತಿಕವಾಗಿ ಇಂದು ಭೂಮಿ ಪೂಜೆ ನೆರವರಿಸಲಾಗಿದೆ. ತಾಳಿಕೋಟಿ ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳು ಸೇರಿದಂತೆ ಇನ್ನು ಸಾಕಷ್ಟು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಿದೆ ಈ ಹಿನ್ನೇಲೆಯಲ್ಲಿ ಮುಂಬರುವ ದಿನಗಳಲ್ಲಿ ಹಂಹತವಾಗಿ ಎಲ್ಲ ರೀತಿಯ ಅಭಿವೃದ್ದಿ ಪಡಿಸಲಾಗುವುದು ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ,ಕರ್ನಾಟಕ ಬ್ಯಾಂಕ ಅಧ್ಯಕ್ಷ ಸಿ ಎಲ್ ಬಿರಾದಾರ, ನಿರ್ಧೇಶಕ ಸತೀಶ ಓಸ್ವಾಲ್, ಅಬ್ಧೂಲಗಫುರಸಾಬ ಮಕಾಂದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸಂನಗೌಡ ಬಿರಾದಾರ(ಜಿಟಿಸಿ) ಗಣೇಶ ಅನ್ನಗೋನಿ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಸೇರಿದಂತೆ ಅನೇಕರು ಇದ್ದರು.