ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ

ಸಿದ್ಧಗಂಗಾ ಶ್ರೀಗಳಿಗೆ "ಭಾರತರತ್ನ" ಪ್ರಶಸ್ತಿ ನೀಡುವಂತೆ ಕರವೇ ತಾಲೂಕಾ ಘಟಕದ ವತಿಯಿಂದ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ19 ಃ ಜ್ಞಾನಯೋಗಿ, ನಡೆದಾಡುವ ದೇವರುಗಳಾದ ಸಿದ್ಧಗಂಗಾ ಶ್ರೀಗಳಿಗೆ "ಭಾರತರತ್ನ" ಪ್ರಶಸ್ತಿ ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕಾ ಅಧ್ಯಕ್ಷ ಸಂತೋಷಗೌಡ ಪಾಟೀಲ್ ಮುಖ್ಯಮಂತ್ರಿ ಕುಮಾರಸ್ವಾಮಿಯರಿಗೆ ಶಿಗ್ಗಾವಿ ತಹಶೀಲ್ದಾರರ ಮೂಲಕ ಅಗ್ರಹಿಸಿ ಶುಕ್ರವಾರ ಮನವಿ ಅಪರ್ಿಸಿದ್ದಾರೆ.

ನಂತರ ಮಾತನಾಡಿದ ಅವರು ಜ್ಞಾನಯೋಗಿ ತ್ರಿವಿಧ ದಾಸೋಹಿ ಕೋಟ್ಯಾಂತರ ಮಕ್ಕಳಿಗೆ ಅನ್ನ, ಜ್ಞಾನ, ಅಕ್ಷರವನ್ನು ಉಣಬಡಿಸುತ್ತಿರುವ ಹಠಯೋಗಿಗೆ ಕೇಂದ್ರ ಸರಕಾರವು ಜೀವತಾವಧಿಯಲ್ಲಿಯೇ ಭಾರತದ ಅತ್ತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.

      ಜೊತೆಗೆ ಕನರ್ಾಟಕದ ಎಲ್ಲ ಸಂಸದರ ಸಭೆ ಕರೆದು ಎಲ್ಲರನ್ನು ಒತ್ತಾಯಿಸುವುದರ ಜೊತೆಗೆ "ಭಾರತ ರತ್ನ" ಪ್ರಶಸ್ತಿಯನ್ನು ಎಲ್ಲ ಧರ್ಮಗಳ ಸಮಾಜದ ಏಳಿಗೆಗಾಗಿ ತನ್ನ ಈಡಿ ಜೀವನವನ್ನೇ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಿರುವ ಯೋಗಿವರ್ಯರಿಗೆ  "ಭಾರತ ರತ್ನ" ಪ್ರಶಸ್ತಿಯನ್ನು ನೀಡಿದಲ್ಲಿ ಆ ಪ್ರಶಸ್ತಿಗೆ ಒಂದು ಮೆರಗು ಬಂದಂತಾಗುತ್ತದೆ ಎಂದರು. 

     ಈ ಸಂದರ್ಭದಲ್ಲಿ ತಾಲೂಕಾ ಮಹಿಳಾಧ್ಯಕ್ಷೆ ಶೋಭಾ ವನಹಳ್ಳಿ, ಪ್ರಧಾನ ಕಾರ್ಯದಶರ್ಿ ಶಂಭು ಕೇರಿ ಯುವ ಘಟಕ ಅಧ್ಯಕ್ಷ ಮೌಲಾಲಿ ಕೌತಾಳ, ಶಹರ ಘಟಕ ಉಪಾಧ್ಯಕ್ಷ ಸಲೀಂ ದುಕಾನದಾರ, ಈರಣ್ಣ ಸಮಗೊಂಡ, ಖಾಜಾಮೊದ್ಧಿನ ಬುಡ್ನಾನವರ ಮುಂತಾದವರು ಉಪಸ್ಥಿತರಿದ್ದರು.