ಸಂಸ್ಕಾರ ಮತ್ತು ಸಂಸ್ಕೃತಿ ನೀಡುವ ಶ್ರದ್ದಾ ಕೇಂದ್ರಗಳೆಂದರೆ ಮಠ, ಮಂದಿರಗಳು : ಶಾಸಕ ಬಣಕಾರ
ಶಿಗ್ಗಾವಿ 01 : ಪುರಾತನ ಕಾಲದಿಂದಲೂ ಸಂಸ್ಕಾರ ಮತ್ತು ಸಂಸ್ಕೃತಿ ನೀಡುವ ಶ್ರದ್ದಾ ಕೇಂದ್ರಗಳೆಂದರೆ ಮಠ, ಮಂದಿರಗಳು ಎಂದು ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಹೇಳಿದರು. ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ 2 ನೇ ದಿನದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು ಮಾನಸಿಕವಾಗಿ ನೆಮ್ಮದಿ ಸಿಗದೆ ಇದ್ದಾಗ ನಾವು ಗುರುಗಳ ಮೊರೆ ಹೋಗುತ್ತೇವೆ. ಮಕ್ಕಳ್ಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಅತಿಮುಖ್ಯ ಅದು ಮಠ ಮತ್ತು ಮಂದಿರದಲ್ಲಿ ಸಿಗುತ್ತದೆ ಎಂದರು.ದಿವ್ಯ ಸಾನಿದ್ಯವಹಿಸಿ ರೇವಣಸಿದ್ದೇಶ್ವರ ಅರಳೆಲೆ ಹಿರೇಮಠ ಶ್ರೀಗಳು ಆರ್ಶಿವದಿಸಿ ಮಾತನಾಡಿ ಮೈಲಾರಲಿಂಗೇಶ್ವರ ಅನೇಕ ಧರ್ಮಿಯರ ಆರಾಧ್ಯದೈವವಾಗಿ ಮಾರ್ಪಟಟಿದೆ. ನಿಜವಾದ ದೇವಮಾನವರಾದ ತಂದೆ ತಾಯಿಗಳನ್ನು ಮನೆಯ ಹೊರಗಡೆ ಇಡುವ ಪದ್ದತಿ ನಿಲ್ಲಬೇಕು ಅಂದಾಗ ಮಾತ್ರ ಇಂತಹ ಧರ್ಮಸಭೆಗೆ ಅರ್ಥ ಬರುತ್ತದೆ ಅತ್ತೆ ಸೊಸೆ ಪ್ರೀತಿ ವಾತ್ಸಲ್ಯದಿಂದ ಇರಬೇಕು ಹಾಗೂ ಎಲ್ಲರೂ ಆರ್ಥಿಕವಾಗಿ ಸಮೃದ್ದರಾಗಬೇಕು ಎಂದು ಹಾರೈಸಿದರು. ಸಂಗನಬಸವ ಮಹಾಸ್ವಾಮಿಗಳು ಆರ್ಶಿವದಿಸಿ ಮಾತನಾಡಿ ಸಮಾಜದಲ್ಲಿ ಅರ್ದಮವಾದಾಗ ಜಾಗೃತಿಯನ್ನು ಮೂಡಿಸಲು ಧರ್ಮಸಭೆ ಮಾಡಲಾಗುತ್ತಿದೆ ಕಾರಣ ಈ ಕಲಿಯುಗದಲ್ಲಿ ಕಚ್ಚಿ.ಕೈ.ಬಾಯಿ ಸ್ವಚ್ಚವಾಗಿರಬೇಕು ಹಾಗೂ ದೇವರಿಗೆ ಪ್ರಾರ್ಥನೆ ಪರಮಪ್ರಿಯ ಆದ್ದರಿಂದ ಸುದ್ದ ಮನಸ್ಸಿನಿಂದ ಪ್ರಾರ್ಥನೆ ಮಾಡಬೇಕು ಎಂದರು. ಧರ್ಮಸಭೆಯಲ್ಲಿ ರಮೇಶ ಸ್ವಾಮಿಗಳು, ಗೊರವಯ್ಯ ನಾಗಪ್ಪಜ್ಜ ಕಾರರ್ಣಿಕರ ಆರ್ಶಿವದಿಸಿದರು. ಅಧ್ಯಕ್ಷತೆ ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸಂಗಪ್ಪ ಕಂಕನವಾಡ ವಹಿಸಿದ್ದರು.
ಭಾಕ್ಸ ಸುದ್ದಿ : 2 ನೇ ದಿನದ ಪುರಾಣ ಪ್ರವಚನವನ್ನು ಪ್ರಭಯ್ಯ ಹಿರೇಮಠ ಪಠಿಸಿದರು, ಶಿವಾನಂದ ಮಂದೇವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ನೀಡಿದರು. ಧಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನೆರವೇರಿತು. ಈ ಸಂದರ್ಭದಲ್ಲಿ ಡಾ.ಮಹೇಶ ಜಗದವರ, ತಿಪ್ಪಣ್ಣಾ ಸಾತಣ್ಣವರ, ತಿರಕಪ್ಪ ಅಂದಲಗಿ, ಕರಿಯಪ್ಪ ಕಟ್ಟಿಮನಿ, ಶಿವಾನಂದ ಕುನ್ನೂರ, ಲಕ್ಷ್ಮಣ ಕುಂದಗೋಳ, ಉಮೇಶ ಗೌಳಿ, ಬಾಪುಗೌಡ ಹೊಸಗೌಡ್ರ, ಸುರೇಶ ಕುರ್ಸಾಪೂರ, ಪ್ರಲ್ಹಾದ ಕಲಾಲ, ತಿರುಪತಿ ಭಜಂತ್ರಿ, ಸುರೇಶ ಮೂಳೆ, ರಮೇಶ ಗಾಣಗೇರ, ಆನಂದ ದಾನಿ, ಚನ್ನಪ್ಪ ಯಲಿಗಾರ, ಪಂಚಪ್ಪ ಯಲಿಗಾರ, ಸುರೇಶ ಬಿಸನಳ್ಳಿ, ಪಕ್ಕೀರ್ಪ ಯಲಿಗಾರ, ಇಸ್ಮಾಯಿಲ್ ಖತೀಬ, ಮಾಲತೇಶ ದಳವಾಯಿ, ಕುಮಾರ ಕಂಕನವಾಡ, ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ಶಂಕರಗೌಡ್ರ ಪಾಟೀಲ ಸ್ವಾಗತಿಸಿದರು, ಲಿಂಗರಾಜ ಗಾಣಗೇರ ವಂದಿಸಿದರು, ಪ್ರೋ ಶಶಿಕಾಂತ ರಾಠೋಡ, ಶಿಕ್ಷಕಿ ಗಂಗೂಬಾಯಿ ದೇಸಾಯಿ ನಿರೂಪಿಸಿದರು.