ಶಿವಶಕ್ತಿ ಶುಗರ್ 18 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಸಾಧನೆ: ಮಲ್ಲಿಕಾರ್ಜುನ್ ಕೋರೆ
ಮಾಂಜರಿ 22: ರಾಜ್ಯಸಭೆಯ ಮಾಜಿ ಸದಸ್ಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸ ದೆಹಲಿಯ ನಿರ್ದೇಶಕ ಯುವ ಮುಖಂಡ ಅಮಿತ್ ಕೋರೆ ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯಬಾಗ್ ತಾಲೂಕಿನ ಸೌಂದತ್ತಿ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಸುಮಾರು 18 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಹೆಚ್ಚಿನ ಪ್ರಮಾಣದ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಈ ಸಾಧನೆಗೆ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಕಬ್ಬು ಬೆಳೆಗಾರರು ತಮ್ಮ ಬೆಳೆಯುವ ಎಲ್ಲ ಕಬ್ಬನ್ನು ಶಿವ ಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಗೆ ಪೂರೈಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕೋರೆ ಹೇಳಿದರು. ಅವರು ಶನಿವಾರರಂದು ರಾಯಬಾಗ್ ತಾಲೂಕಿನ ಸೌಂದತ್ತಿ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ ನಿರ್ದೇಶಕರಾದ ಭರತೇಶ್ ಬನವಣೆ, ಅಜಿತ್ ರಾವ್ ದೇಸಾಯಿ, ಮಲ್ಲಪ್ಪ ಮೈಶಾಳೆ, ಮಹಾವೀರ್ ಕಾತ್ರಾಳೆ, ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಾದ ಬಿ ಎ ಪಾಟೀಲ್, ಜೆ ಕೃಷ್ಣನ್ ಎನ್. ಎಸ್. ಮುಲ್ಲಾ, ವಿಜಯ ಪಾಟೀಲ್ ಹಾಜರಿದ್ದರು. ಈ ವರ್ಷ ಪ್ರಸಕ್ತ ಸಾಲಿನಲ್ಲಿ ಕಬ್ಬು ಹಂಗಾಮು ಅತ್ಯಂತ ಕಷ್ಟಕರ ಇದ್ದರೂ ಕೂಡ ಶಿವ ಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಬ್ಬು ಬೆಳೆದ ರೈತರು ನಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕಾರ ನೀಡಿದ ಎಲ್ಲಾ ಕಬ್ಬು ಬೆಳೆಗಾರ ರೈತರಿಗೆ ಧನ್ಯವಾದಗಳನ್ನು ತಿಳಿಸಿದರು. ಅತಿ ಹೆಚ್ಚು ಕಬ್ಬು ಪೂರೈಸಿ ಅತೀ ಹೆಚ್ಚು ಕಬ್ಬು ಸಾಗಾಣಿಕೆ ಮಾಡಿ ಮತ್ತು ಕಟಾವು ಮಾಡಿದ ಹಲವಾರು ಕಾರ್ಮಿಕರನ್ನು ರೈತರನ್ನು ಅವರು ಸನ್ಮಾನಿಸಿದರು. ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಾದ ಎನ್ ಎಸ್ ಮುಲ್ಲಾ ಜಿ ಕೃಷ್ಣನ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಪಾಂಡು ಬಡಗಣ್ಣವರ್, ಎನ್ ಎಸ್ ನಿಪ್ಪಾಣಿ, ಸಂಜಯ ಯಾದವ್, ರಾಘವೇಂದ್ರ ಪತ್ತಾರ್, ಮಹಾವೀರ ಪಾಟೀಲ್, ಮಹಾಂತೇಶ್ ಕಾಡಾಪುರೆ ಹಾಗೂ ಇನ್ನುಳಿದ ವಿಭಾಗ ಪ್ರಮುಖರು ಹಾಜರಿದ್ದರು. ಬಿಎಸ್ ಮುಧೋಳ್ ಸ್ವಾಗತಿಸಿ, ರಾಘವೇಂದ್ರ ಪತ್ತಾರ್ ನಿರೂಪಿಸಿ, ಬೆಳೆಶೇ ವಂದಿಸಿದರು.