ಬೈಲಹೊಂಗಲ 04: ಶಿವರಾತ್ರಿ ಅಂಗವಾಗಿ ಸೋಮವಾರ ಪಟ್ಟಣದ ಶಿವಮಂದಿರಗಳಲ್ಲಿ ಹಾಗೂ ಕಲಗುಡಿಯ ರಾಮಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು.
ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಈಶ್ವರನಿಗೆ ಮಹಾಮಸ್ತಕಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಅತ್ಯಂತ ವಿಜೃಂಭಣೆಯಿಂದ ಜರುಗಿದವು. ಓಂ ನಮ: ಶಿವಾಯ ಪಂಚಾಕ್ಷರಿ ಮಂತ್ರದ ಜಪ ಎಲ್ಲೆಡೆ ಮುಗಿಲು ಮುಟ್ಟಿತು.
ಮಹಿಳೆಯರು, ಪುರುಷರು ಹಾಗೂ ಮಕ್ಕಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾದರು. ಇತಿಹಾಸ ಪ್ರಸಿದ್ಧ ಕಲಗುಡಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವನ ಮೂತರ್ಿಗೆ ಹೂ-ಮಾಲೆ, ಬಿಲ್ವಪತ್ರೆ ಅಪರ್ಿಸುವ ಮೂಲಕ ಭಕ್ತರು ಪುನೀತರಾದರು.
ಜವಳಿ ಕೂಟದ ಜಡೆಯ ಶಂಕರಲಿಂಗೇಶ್ವರ ದೇವಸ್ಥಾನ, ಗೊಂಬಿಗುಡಿಯ ಶಿವ ಪಾರ್ವತಿ ದೇವಸ್ಥಾನ, ದೊಡ್ಡಾದೇವರ ಈಶ್ವರಲಿಂಗ, ಇಂದಿರಾ ನಗರದ ಈಶ್ವರಲಿಂಗ ದೇವಸ್ಥಾನ, ವಿದ್ಯಾನಗರದ ಈಶ್ವರಲಿಂಗ ದೇವಸ್ಥಾನ, ನೀರಾವರಿ ಕಾಲೋನಿಯ ಪಂಚವಟಿ ಶಿವಾಲಯ ಸೇರಿದಂತೆ ಬಹುತೇಕ ಮಂದಿರಗಳಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮೀಪದ ಶ್ರೀ ಕ್ಷೇತ್ರ ಸೊಗಲದಲ್ಲಿ ಶಿವರಾತ್ರಿ ಅಂಗವಾಗಿ ಪಾರ್ವತಿ ಹಾಗೂ ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಭರ್ಜರಿ ವ್ಯಾಪಾರ: ಕಲಗುಡಿಯ ರಾಮಲಿಂಗೇಶ್ವರ ದೇವಸ್ಥಾನ ಆವರಣ ಹಾಗೂ ವಿವಿದೆಡೆ ವ್ಯಾಪಾರ ವಹಿವಾಟು ನಡಸುವವರಿಗೆ ಸೋಮವಾರ ಶುಕ್ರದೆಸೆ ತಂದುಕೊಟ್ಟಿತು. ಮಾರುಕಟ್ಟೆಯಲ್ಲಿ ಹಣ್ಣು ಹಂಪಲುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಶಿವನ ಭಕ್ತಾಧಿಗಳು ಹಣ್ಣು, ಹಂಪಲ ಸೇವಿಸಿ ಉಪವಾಸ ವ್ರತ ಆಚರಿಸುವುದರಿಂದ ಮಾರುಕಟ್ಟೆಯಲ್ಲಿ ಜನಸಂದಣಿ ದುಪ್ಪಟ್ಟಾಗಿತ್ತು. ಕಲ್ಲಂಗಡಿ, ಅನಾನಸ್, ಬಾಳೆಹಣ್ಣು, ಖಜರ್ೂರ, ಎಳನೀರು ವ್ಯಾಪಾರ ಭರ್ಜರಿಯಾಗಿತ್ತು. ಹಣ್ಣು ಹಂಪಲಗಳ ಬೆಲೆ ಗಗನಕ್ಕೇರಿದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.