ಲೋಕದರ್ಶನ ವರದಿ
ಶಿಗ್ಗಾವಿ28 : ತಾಲೂಕಿನ ಬಂಕಾಪುರ ಗ್ರಾಮಕ್ಕೆ ನೂತನ ಸಚಿವರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಆಗಮಿಸಿದ ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಯವರನ್ನು ಪಟ್ಟಣದ ಕುರುಬ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭವ್ಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಶಿವಳ್ಳಿ ಉತ್ತರ ಕನರ್ಾಟಕದ ಅಭಿವೃದ್ದಿಗೆ ಇದೂವರೆಗೂ ಯಾವೂದೇ ಪ್ರಾತಿನಿಧ್ಯ ನೀಡಿರಲ್ಲಿಲಾ ಆದರೆ ಈಗ ನೂತನವಾಗಿ ಆಯ್ಕೆಯಾದ ಎಂಟು ಸಚಿವರಲ್ಲಿ ಆರು ಸಚಿವ ಸ್ಥಾನವನ್ನು ಉತ್ತರ ಕನರ್ಾಟಕಕ್ಕೆ ನೀಡಲಾಗಿದೆ.
ಇದನ್ನು ನಾವು ನಾಮಫಲಕವಾಗಿ ಬಳಸಿಕೊಳ್ಳಬೇಕಾಗಿದೆ. ಬರಗಾಲದ ಬವಣೆಯಿಂದ ಪಾರಾಗಲು ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ ಇದರಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ಬೆಳಗಾವಿ ಬಾಗಲಕೋಟಿ ಗದಗ ಹಾವೇರಿ ಜಿಲ್ಲೆಗೆ ವರದಾನ ವಾಗಲಿದೆ ಎಂದು ಹೇಳಿದರು.
ಶಿಗ್ಗಾವಿ ಬೆಣ್ಣೆ ಹಳ್ಳವನ್ನು 300 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಹನಿ ನೀರಾವರಿ ಯೋಜನೆ ರೂಪಿಸಿ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ಉತ್ತರ ಕನರ್ಾಟಕ ವಿದ್ಯಾವಂತ ನಿರೂದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಉದ್ಯಮಗಳನ್ನು ಸ್ಥಾಪಿಸಿ ನಿರೂದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಶ್ರಮಿಸುವದಾಗಿ ಹೇಳಿದರು.
ನಿಮಗೆ ಯಾವ ಸಚಿವ ಸ್ಥಾನ ಸಿಗಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಯಾವುದೇ ಹುದ್ದೆ ಕೊಟ್ಟರು ನಿಭಾಯಿಸುವ ಸಾಮಥ್ರ್ಯ ನಲ್ಲಲ್ಲಿದ್ದು ಅದನ್ನು ಉತ್ತರ ಕನರ್ಾಟಕದ ಅಭಿವೃದ್ಧಿಗಾಗಿಯೇ ಬಳಸುವದಾಗಿ ಹೇಳಿದರು.
ಮುಖಂಡರಾದ ಬಸವನಗೌಡ ದೇಸಾಯಿ, ರಾಮಣ್ಣ ರಾಣೋಜಿ, ಸುರೇಶಪ್ಪ ಹಂಡೆ, ಸತೀಷ ಆಲದಕಟ್ಟಿ, ಡಿ.ಎನ್.ಕುಡಲ, ಎನ್.ಬಿ.ಕಟಗಿ, ಮಲ್ಲೇಶಪ್ಪ ಬಡ್ಡಿ, ರಮೇಶ ದುಗ್ಗತ್ತಿ, ಮಹಲಿಂಗಪ್ಪ ಹಳವಳ್ಳಿ, ಮಾಲತೇಶ ರಾಣೋಜಿ, ಮಹಬಳೇಶ ಹೊನಕೇರಿ, ಶಿವಾನಂದ ರಾಮಗೇರಿ, ಶಿವಾನಂದ ಈರಪ್ಪನವರ, ನಿಂಗಪ್ಪ ಮಾಯಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.