ಬೈಲಹೊಂಗಲ 06: ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ, ಹಿಂದೂ ಸಾಮ್ರಾಜ್ಯದ ಅಧಿಪತಿಯಾಗಿ ಅಪಾಯದ ಅಂಚಿನಲ್ಲಿದ್ದ ಹಿಂದೂ ಸಮಾಜವನ್ನು ರಕ್ಷಿಸಿದ ಕೀತರ್ಿ ಅವರಿಗೆ ಸಲ್ಲುತ್ತದೆ ಎಂದು ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು.
ಅವರು ಸೋಮವಾರ ಪಟ್ಟಣದ ಬೆಲ್ಲದ ಕೂಟದಲ್ಲಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೂ ಸಮಾಜವನ್ನು ತುಳಿಯುವ ದೃಷ್ಠಿಯಿಂದ ಪರಕೀಯರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡುವದರೊಂದಿಗೆ ಹಿಂದೂ ಧಮರ್ಿಯರ ಹತ್ಯೆ ಹಾಗೂ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಧರ್ಮ ರಕ್ಷಣೆಗೆ ನಿಂತ ಮೊದಲಿಗರಲ್ಲಿ ಶಿವಾಜಿ ಮಹಾರಾಜರು ಒಬ್ಬರು. ಹಿಂದೂಗಳ ಆರಾಧ್ಯ ದೈವ ಗೋವನ್ನು ರಕ್ಷಿಸಿ ದೇಶದಲ್ಲಿಯೇ ಪ್ರಥಮವಾಗಿ ಗೋಹತ್ಯೆ ನಿಷೇಧ ಮಾಡಿದ ಯಶಸ್ಸು ಶಿವಾಜಿ ಮಹಾರಾಜರದ್ದು ಎಂದರು.
ಚಿತ್ರನಟ ಶಿವರಂಜನ ಬೋಳಣ್ಣವರ ಕಾದರವಳ್ಳಿಯ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾ ಅಕ್ಕನವರು ಸಾನಿಧ್ಯ ವಹಿಸಿ ಮಾತನಾಡಿ, ಶಿವಾಜಿ ಮಹಾರಾಜರ ಆಡಳಿತ ವೈಖರಿಯ ಕುರಿತು ಮಾಮರ್ಿಕವಾಗಿ ವಿವರಿಸಿದರು.
ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯೂ ಪಟ್ಟಣದ ಬೆಲ್ಲದ ಕೂಟದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಂಝ್ ಮೇಳದೊಂದಿಗೆ ಸಂಚರಿಸಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಸಮಾಪ್ತಿಯಾಯಿತು.
ಚಿತ್ರನಟ ಅರವಿಂದ, ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಬಿಜೆಪಿ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮುರಗೇಶ ಗುಂಡ್ಲೂರ, ಗುರು ಮೆಟಗುಡ್ಡ, ಸುರೇಶ ಯರಗಟ್ಟಿ ಮೆರವಣಿಗೆಯಲ್ಲಿದ್ದರು.
ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ತಾಲೂಕಾ ಆಡಳಿತ ವತಿಯಿಂದ ಶಿವಾಜಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಮರಾಠಾ ಸಮಾಜದ ಮುಖಂಡರಾದ ಮಾರುತಿ ತಿಗಡಿ, ವಿಠ್ಠಲ ದಾಸೋಗ, ವಿಠ್ಠಲ ಯಾಸನ್ನವರ, ಗೋಪಾಲ ರಾಜಗೋಳಿ, ನಾರಾಯಣ ನಲವಡೆ, ತಾಲೂಕಾ ಅಧ್ಯಕ್ಷ ಬಸವರಾಜ ಯಾಸನ್ನವರ, ಅಪ್ಪಾಸಾಹೇಬ ಬೋಸಲೆ, ಪುರಸಭೆ ಸದಸ್ಯರಾದ ಬಾಬು ಕುಡಸೋಮನ್ನವರ, ಶಿವಬಸ್ಸು ಕುಡಸೋಮನ್ನವರ, ಅಶೋಕ ಸವದತ್ತಿ, ಮಹಾಂತೇಶ ಹೊಸೂರ, ಶಿವಾನಂದ ಬೆಳಗಾವಿ, ವಿಜಯಕುಮಾರ ರಾಜಗೋಳಿ, ಆನಂದ ತಡಕೋಡ, ಬಸವರಾಜ ಗಾಡದ, ಉಮೇಶ ಗಂಗಪ್ಪನವರ, ವಕೀಲ ಶಿವಾನಂದ ಬೆಳಗಾವಿ, ಮಂಜುನಾಥ ಜಾಧವ, ರಮೇಶ ಸಿಂಧೆ ಹಾಗೂ ಸಮಾಜ ನೂರಾರು ಜನರು ಇದ್ದರು.