ಶಿವಾಜಿ ಮಹಾರಜರ ಜೀವನ ಚರಿತ್ರೆ ಆಧಾರಿತ ಪ್ರಶ್ನೋತ್ತರ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ 07: ದಿ. 06ರಂದು ನಗರದ ಮರಾಠಾ ಮಂಡಳ ಪ್ರೌಢ ಶಾಲೆಯಲ್ಲಿ ಭಗವೆ ವಾದಳ ಯುವಕ ಮಂಡಳ ಹಾಗೂ ಶಾಸಕ ಅನಿಲ ಬೆನಕೆ ಪುರಸ್ಕೃತ ಛತ್ರಪತಿ ಶಿವಾಜಿ ಮಹಾರಜರ ಜೀವನ ಚರಿತ್ರೆಯನ್ನು ಆಧಾರಿತ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತಿಳಿಸಿದ ಶಾಸಕರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಛತ್ರಪತಿ ಶಿವಾಜಿ ಮಹಾರಾಜರ ಜಿವನಾಧಾರಿತ ಪ್ರಶ್ನೋತ್ತರ ಕಾರ್ಯಕ್ರಮವನ್ನು ದಿ. 29ರಂದು ಆಯೋಜಿಸಲಾಗಿತ್ತು, 2000 ಕ್ಕಿಂತ ಹೆಚ್ಚು ವಿದ್ಯಾಥರ್ಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದರು ಎಂದ ಅವರು ಕಾರ್ಯಕ್ರಮವನ್ನು ಆಯೋಜನೆ ಮಾಡುವ ಉದ್ದೇಶವೆನೆಂದರೆ ನಾಗರಿಕರು ಹಾಗೂ ಮಕ್ಕಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಹಾಗೂ ಅವರ ಗುಣಗಳನ್ನು ತಮ್ಮಲ್ಲಿಯೂ ಕೂಡಾ ಅಳವಡಿಸಿಕೊಂಡು ಅವರಂತೆಯೇ ಮುನ್ನಡೆಯಲು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮಾದ್ಯಮದಲ್ಲಿ ಪ್ರಥಮ ಬಹುಮಾನವನ್ನು ಕುಮಾರಿ. ಶಿವಾನಿ ಮನೋಹರ ಮಲತವಾಡಕರ, ಪ್ರೌಢ ಮಾದ್ಯಮದಲ್ಲಿ ಪ್ರಥಮ ಬಹುಮಾನವನ್ನು ಸಮೀಕ್ಷಾ ಹೇಮಂತ ಹೆಬ್ಬಾಳಕರ ಹಾಗೂ ಓಪನ್ ವಿಬಾಗದಲ್ಲಿ ಜ್ಯೋತಿಬಾ ಬಬನ ಚೌಗುಲೆ ಇವರು ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಶಶಿ ಪಾಟೀಲ ಬೆಳಗಾವಿ ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳು, ಪಾಂಡುರಂಗ ಧಾಮಣೆಕರ ಬೆಳಗಾವಿ ಉತ್ತರ ಬಿಜೆಪಿ ಅಧ್ಯಕ್ಷರು, ಹಿರೇಮಠ ಸರ್, ಮರಾಠಾ ಮಂಡಳ ಶಾಲೆಯ ಮುಖ್ಯ ಗುರುಗಳಾದ ಪರಶುರಾಮ ಹಸಬೆ ಹಾಗೂ ಭಗವೆ ವಾದಳ ಯುವಕ ಮಂಡಳದ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.