ಶಿರಸಂಗಿ ಗುರುಕುಲ ವಿದ್ಯಾನಿಕೇತನ ಆಂಗ್ಲ ಶಾಲೆಯ ಸ್ನೇಹ ಸಮ್ಮೇಳನ

ಶಿರಸಂಗಿ 09: ಮಾತೃ ಹೃದಯದಿಂದ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಾಪಂ ಸದಸ್ಯ ಮಹಾರಾಜ ಕಣವಿ ಹೇಳಿದರು. 

ಸ್ಥಳೀಯ ಸಾರ್ವಜನಿಕ ಕ್ರೀಂಡಾಗಣದಲ್ಲಿ ಗುರುಕುಲ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಹಮ್ಮಿಕೊಂಡ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಶಾಲೆಯ ನಿದರ್ೇಶಕ ವಿರೇಶ ಕುಲಕಣರ್ಿ ಮಾತನಾಡಿ ಕಳೆದ 2 ವರ್ಷಗಳಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಪರವಾಣಿಗೆ ಪಡೆಯುವದಕ್ಕೆ ಸಾಕಷ್ಟು ಷರತ್ತು ಹೇರಿದೆ. ಇಗ ನಾವು ಜಯಸಾಧಿಸದೇ ಇರಬಹುದು ಒಂದಿಲ್ಲ ಒಂದು ದಿನ ಗೆಲವು ನಮ್ಮದಾಗುತ್ತದೆ. ಶಾಲೆಯನ್ನು ಕಟ್ಟಿ ಬೆಳಸುವಲ್ಲಿ ಆಡಳಿತ ಮಂಡಳಿ, ಪಾಲಕರ ಹಾಗೂ ಗ್ರಾಮಸ್ಥರ ನೆರವು ಸಾಕಷ್ಟಿದೆ ಎಂದರು. ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಲೆಯ ಮುಖ್ಯ ಗುರುಮಾತೆ ರೂಪಾ ನಾಗಠಾಣ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಬೆಳವಣಿಗೆ ಹಾಗೂ ವಾಷರ್ಿಕ ವರದಿಯನ್ನು ವಾಚಿಸಿದರು. ಶಿವಯ್ಯ ಶಿವಪ್ಪಯ್ಯನಮಠ, ವೀರುಪಾಕ್ಷಪ್ಪ ಪೂಜಾರ, ಬಸವಪ್ರಭು ಅಣ್ಣಿಗೇರಿ, ಕಮಲಾಕ್ಷಿ ಸಾಲಿಮಠ, ಮಾರುತಿ ಭಜಂತ್ರಿ, ಸಿದ್ದು ಜಂಗನ್ನವರ, ನೀಲಮ್ಮ ಪೂಜಾರ, ಲಕ್ಷ್ಮೀ ಜಟ್ಟೆನ್ನವರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. 

ಶಾಲೆಯಿಂದ ಪಾಲಕರಿಗೆ ಏರ್ಪಡಿಸಿದ್ದ ವಿವಿಧ ಸ್ಪಧರ್ೆಗಳಲ್ಲಿ ಜಯಶಾಲಿಯಾದ ಪಾಲಕರಿಗೆ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯ ಸಾಧನೆ ಅರಿತು ನ್ಯೂ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ನಂತರ ಮಕ್ಕಳಿಂದ ವಿವಿಧ ತರಹದ ನೃತ್ಯಗಳು ನೆಡೆದವು.