ಕಾಗವಾಡ 16: ಪ್ರತಿಯೊಂದು ಗ್ರಾಮದ ಪಂಚಾಯತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯ ಬಳಿಸಬಾರದು. ಪಾರದರ್ಶಕ ಆಡಳಿತ ನೀಡಬೇಕು. ಈ ಎಲ್ಲ ವ್ಯವಸ್ಥೆಗಳು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿ 12 ಪ್ರಶಸ್ತಿಗಳನ್ನು ಪಡೆದು ರಾಜ್ಯದಲ್ಲಿ ಮಾದರಿ ಪಂಚಾಯತಿಯಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ರಾಜ್ಯದ ಯಾವುದೇ ಗ್ರಾಮದಲ್ಲಿ ನಾನು ಕಂಡಿಲ್ಲಾ ಎಂದು ಕನರ್ಾಟಕ ರಾಜ್ಯ ಪಂಚಾಯತಿ ಇಲಾಖೆಯ ನಿದರ್ೇಶಕ ಎಂ.ಕೆ.ಕೆಂಪೆಗೌಡಾ ಸಂತಸದಿಂದ ಹೇಳಿದರು.
ಶನಿವಾರ ದಿ. 15ರಂದು ಶಿರಗುಪ್ಪಿ ಗ್ರಾಮಕ್ಕೆ ರಾಜ್ಯದ ಪಂಚಾಯತಿ ಇಲಾಖೆಯ ನಿದರ್ೇಶಕ ಎಂ.ಕೆ.ಕೆಂಪೆಗೌಡಾ ಭೇಟಿನೀಡಿ, ಪಂಚಾಯತಿಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಇಕಬಾಲ ಕನವಾಡೆ ವಹಿಸಿದ್ದರು.
ಕನರ್ಾಟಕ ರಾಜ್ಯದಲ್ಲಿ 6ಸಾವಿರ ಗ್ರಾಮ ಪಂಚಾಯತಿಗಳಿದ್ದು. ಇದರಲ್ಲಿ ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಶುದ್ಧ ಕುಡಿಯುವ ನೀರು, ಒಳ್ಳೆ ರಸ್ತೆ, ಚರಂಡಿ, ಬೀದಿದೀಪಗಳ ವ್ಯವಸ್ಥೆ ನೀಡಲೇಬೇಕು. ಕೆಲ ಗ್ರಾಮಗಳಲ್ಲಿ ಪಾರದರ್ಶಕ ಆಡಳಿತ ನೀಡದೆ ಹೋಗಿದ್ದರಿಂದ, ಅಲ್ಲಿಗೆ ಅವ್ಯವಹಾರ, ಸದಸ್ಯರು ಮತ್ತು ಸಿಬ್ಬಂದಿಗಳಲ್ಲಿ ಮತಬೇಧ ಎದ್ದು ಕಾಣುತ್ತಿದೆ ಎಂದು ಎಂ.ಕೆ.ಕೆಂಪೆಗೌಡಾ ಹೇಳಿದರು.
ನರೇಗಾ ಅತ್ಯುತ್ತಮ ಯೋಜನೆ:
ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಸಕರ್ಾರ ರೂಪಿಸಿರುವ ನರೇಗಾ ಯೋಜನೆ ಅತ್ಯುತ್ತಮ ಯೋಜನೆ. ಎಲ್ಲ ರೀತಿ ಅಭಿವೃದ್ಧಿ ಮಾಡಿಕೊಳ್ಳಲು, ಹಣದ ವ್ಯವಸ್ಥೆ ಇಲ್ಲಿದೆ. ಗ್ರಾಮದ ಅಭಿವೃದ್ಧಿಗಾಗಿ ಎಲ್ಲರು ಒಂದಾಗಿ ಯೋಜನೆಯ ಸದ್ಬಳಕೆ ಮಾಡಿಕೊಂಡರೆ, ರಾಜ್ಯ ಸಕರ್ಾರದ ಅನುದಾನದ ಅಷ್ಟು ಅವಶ್ಯಕತೆ ಬರುವದಿಲ್ಲಾ ಎಂದು ಅಧಿಕಾರಿಗಳಿಗೆ, ಸದಸ್ಯರಿಗೆ ಕೆಂಪೆಗೌಡಾ ಕಿವಿಮಾತು ಹೇಳಿದರು.
ಒಳ ಚರಂಡಿ ಯೋಜನೆ ನೀಡಿರಿ:
ನ್ಯಾಯವಾದಿಗಳಾದ ಅಭಯ ಅಕಿವಾಟೆ ಇವರು ಅಧಿಕಾರಿಗಳನ್ನು ಸ್ವಾಗತಿಸಿ, ಶಿರಗುಪ್ಪಿ ಗ್ರಾಮದ ಜನತೆ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ರಾಜಕೀಯ ಕೇವಲ ಚುನಾವಣೆಗಳಲ್ಲಿ ಮಾತ್ರ ಬಳಿಸುತ್ತಿದ್ದು, ಬಳಿಕ ಎಲ್ಲರು ಒಂದಾಗಿರುತ್ತೇವೆ. ಅಮೇರಿಕಾ ದೇಶದ ಅಂತರ-ರಾಷ್ಟ್ರೀಯ ಗೂಗಲ್ ಪ್ರಶಸ್ತಿಯೊಂದಿಗೆ ದೇಶ, ರಾಜ್ಯ, ಜಿಲ್ಲಾ ಮಟ್ಟದ 12 ಪ್ರಶಸ್ತಿಗಳು ಲಭಿಸಿವೆ. ಇಲ್ಲಿಗೆ ಒಳ ಚರಂಡಿ ಕೊರತೆಯಿದ್ದು. ಯೋಜನೆಗಾಗಿ ಅನುದಾನ ಮಂಜೂರುಗೊಳಿಸಿರಿ ಎಂದು ಬೇಡಿಕೆ ಮಂಡಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಕೊಂಡರು.
ಗ್ರಾಪಂ ಹಿರಿಯ ಸದಸ್ಯ ರಾಮಗೌಡಾ ಪಾಟೀಲ ಗ್ರಾಮದಲ್ಲಿಯ ಕುಡಿಯುವ ನೀರು, ಇನ್ನಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿ, ಸಕರ್ಾರದಿಂದ ಬರುವ ಅನುದಾನದ ಬಗ್ಗೆ ಕೇಳಿಕೊಂಡರು. ಪಂಚಾಯತಿಯ ಸಿಬ್ಬಂದಿ ಪದ್ಮಣ್ಣಾ ಕುಂಬಾರ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.
ಅಥಣಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪ್ಪನವರ, ತಾಲೂಕಿನ ಪಂಚಾಯತಿಗಳ ಮಾಹಿತಿ ಅಧಿಕಾರಿಗಳಿಗೆ ನೀಡಿದರು. ಗ್ರಾಪಂ ಅಧ್ಯಕ್ಷ ಇಕಬಾಲ ಕನವಾಡೆ, ಉಪಾಧ್ಯಕ್ಷ ಸುನಂದಾ ನಾಂದಣಿ, ಸದಸ್ಯರಾದ ಭಾವುಸಾಹೇಬ ಕಾಗವಾಡೆ, ಆದಪ್ಪಾ ಕಾಂಬಳೆ, ವಿದ್ಯಾಧರ ಕಾಂಬಳೆ, ಕಾಂಚನ ಕಾಟಕರ, ಮಿನಾಕ್ಷಿ ಕುಂಬಾರ, ಸುನೀತಾ ಕಾಂಬಳೆ, ಸುಶ್ಮಾ ಸುತಾರ, ಜಯಶ್ರೀ ಕೋವರ್ಿ, ಅನಸಾರ್ಬಿ ರಾಜಾಪುರೆ, ಮಾಜಿ ಗ್ರಾಪಂ ಅಧ್ಯಕ್ಷ ಎಂ.ಕೆ.ಪಾಟೀಲ, ಮಹಮ್ಮದ ಗೌಂಡಿ, ವಿಜಯ ಅಕಿವಾಟೆ, ಮನೋಹರ ಕಾತ್ರಾಳೆ, ಪಿಡಿಒ ಗೋಪಾಲ ಮಾಳಿ, ತಾಪಂ ಸಹಾಯಕ ನಿದರ್ೇಶಕ ಅರುಣ ಮಾಚಕನ್ನವರ, ಕಾರ್ಯದಶರ್ಿ ಶಿವಾನಿ ಜಾಧವ, ಎಸ್.ಡಿ.ಎ ಭೀಮಾಶಂಕರ ಧಂದರಗಿ ಸೇರಿದಂತೆ ಅನೇಕರು ಇದ್ದರು.