ಶರಣ ಸಂಸ್ಕೃತಿ ಉತ್ಸವ: 63 ಶ್ರೀಗಳ ಪಾದಪೂಜೆ ಕಾರ್ಯಕ್ರಮ

Sharan Culture Festival:- Raibag news

ರಾಯಬಾಗ 10: ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ನಡೆದ 63 ಶ್ರೀಗಳ ಪಾದಪೂಜೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಅವರು ಭಾಗವಹಿಸಿ ಶ್ರೀಗಳಿಂದ ಸತ್ಕಾರ ಸ್ವೀಕರಿಸಿದರು. ವೀರಭದ್ರ ಸ್ವಾಮೀಜಿ, ಪೃಥ್ವಿರಾಜ ಜಾಧ, ಅಮೀತ ಜಾಧವ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಶ್ರವಣ ಕಾಂಬಳೆ, ಸತೀಶ ಜಾಧವ, ರಾಮಚಂದ್ರ ಮಿರ್ಜೆ ಸೇರಿ ಅನೇಕರು ಇದ್ದರು.