ಶಕ್ತಿ ಯೋಜನೆ ಜನಮನ್ನಣೆ ಗಳಿಸಿದ ಮಹತ್ವಾಕಾಂಕ್ಷೆ ಯೋಜನೆ : ಶಾಸಕ ಯಾಶೀರಖಾನ

Shakti Yojana is an ambitious project that has gained popular recognition: MLA Yashir Khana

ಶಕ್ತಿ ಯೋಜನೆ ಜನಮನ್ನಣೆ ಗಳಿಸಿದ ಮಹತ್ವಾಕಾಂಕ್ಷೆ ಯೋಜನೆ : ಶಾಸಕ ಯಾಶೀರಖಾನ  

ಶಿಗ್ಗಾವಿ 11 : ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿದ ಹಾಗೂ ಜನಮನ್ನಣೆ ಗಳಿಸಿದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು.ಪಟ್ಟಣದ ಹೊಸ ಬಸ ನಿಲ್ದಾಣದಲ್ಲಿ ನೂತನವಾಗಿ ತಾಲೂಕಿಗೆ ಬಂದಿರುವ 3 ಬಸಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದು ಶಕ್ತಿ ಯೋಜನೆ ಮೂಲಕ ರಾಜ್ಯದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಹಾಗೂ ಸಾರಿಗೆ ಅಧಿಕಾರಿಗಳು ಲಾಭದಾಯಕ ಮಾರ್ಗ ಬೇಡ ನಮಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಿರಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು. ಸವಣೂರ ಡಿಪೋ ಬಸ ತೆಗೆದುಕೊಂಡು ಬಂದು ಇಲ್ಲಿ ಉದ್ಘಾಟನೆ ಮಾಡಿರುವುದು ಸಂತೋಷ ಆದರೆ ಶಿಗ್ಗಾವಿ ಡಿಪೋ ಉದ್ಘಾಟಿಸಿದರೆ ಇನ್ನೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಡಿ.ಎಸ್‌.ದುಂಡಿಗೌಡ್ರಶಂಕರನಾಗ ಆಟೋ ಚಾಲಕ ಸಂಘದ ಗೌರವಾದ್ಯಕ್ಷ  ಗ್ಯಾರಂಟಿ ಅಧ್ಯಕ್ಷ ಎಸ್‌.ಎಫ್‌.ಮಣಕಟ್ಟಿ, ಗುಡ್ಡಪ್ಪ ಜಲದಿ, ಎ.ಜೆ.ಮುಲ್ಲಾ, ಸುಭಾಸ ಮಜ್ಜಗಿ, ಗೌಸಖಾನ ಮುನಶಿ, ಮಂಜುನಾಥ ಮಣ್ಣಣ್ಣವರ, ಮಹಾಂತೇಶ ಸಾಲಿ, ಅತ್ತಾವುಲ್ಲಾ ಖಾಜೇಖಾನವರ, ಚಂದ್ರು ಕೊಡ್ಲಿವಾಡ, ಮಲ್ಲಮ್ಮ ಸೋಮನಕಟ್ಟಿ, ಮುನ್ನಾ ಲಕ್ಷ್ಮೇಶ್ವರ, ಶಂಭು ನೇರ್ತಿ, ಶಿವಾನಂದ ಕುನ್ನೂರ, ಪಿರೋಜ ಕಾಮನಹಳ್ಳಿ, ಹನುಮಂತ ಭಾರಂಗಿ, ಸೇರಿದಂತೆ ಸವಣೂರ ಡಿಪೋ ವ್ಯವಸ್ಥಾಪಕ ಅಮ್ಮಣಗಿ, ಸಾರಿಗೆ ನಿಯಂತ್ರಕರಾದ ಆರ್‌.ಪಿ.ನಧಾಪ್, ಎಸ್‌.ಡಿ.ಕಲಾಲ, ಹಂಚಿನಮನಿ, ಐ.ಎ.ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.