ಏಳು ಅಂಗಡಿಗಳ ಕಳ್ಳತನ: ಸಾರ್ವಜನಿಕರಲ್ಲಿ ಭಯ

ಮೂಡಲಗಿ 08: ಪಟ್ಟಣದ ಎಪಿಎಮ್ಸಿಯಲ್ಲಿರುವ ಏಳು ಅಂಗಡಿಯ ಬೀಗ ಒಡೆದು ಒಳ ಪ್ರವೇಶಿಸಿ ಕಳ್ಳತನ ಮಾಡಲು ಪ್ರಯತ್ನಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದ್ದು ಈ ಕುರಿತು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ ಎಂದು ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ತಿಳಿಸಿದ್ದಾರೆ. 

    ಮಂಗಳವಾರ ಮುಂಜಾನೆ ಸಮಯದಲ್ಲಿ ಕಳ್ಳರು ಕೆ.ಎಚ್ ಸೋನವಾಲ್ಕರ ಫಟರ್ಿಲೈಜರ್ ಸೇರಿದಂತೆ ಆರು ಫಟರ್ಿಲೈಜರ್ ಅಂಗಡಿಯ ಸಿಸಿ ಟಿವಿಗಳನ್ನು ನಾಶಪಡಿಸಿ ಅಂಗಡಿಯ ಒಳ ನುಗ್ಗಿ ಜಾಲಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರಲ್ಲಿ ಭಯದ ವಾತವಾರಣ;  ಕಳೆದ ಒಂದು ವರ್ಷಗಳಿಂದ ಪಟ್ಟಣದಲ್ಲಿ ರಾತ್ರಿ ವೇಳೆಯಲ್ಲಿ ನಿರಂತರವಾಗಿ ವ್ಯಾಪಾರ ಮಳಿಗೆ ಮತ್ತು  ಮನೆಗಳ ಬೀಗ ಮುರಿದು ಒಂದೇ ಮಾದರಿಯಲ್ಲಿ ಕಳವು ಮಾಡುತ್ತಿರುವ ಜಾಲ ಪಟ್ಟಣದಲ್ಲಿ ಬೀಡುಬಿಟ್ಟಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ. 

ಒಂದು ವರ್ಷದ ಹಿಂದೆ ಜೀಪ್ ಸರ್ಕಲ್ನಲ್ಲಿ ನಾಲ್ಕೈದು ಅಂಗಡಿ ಹಾಗೂ ಇತ್ತಿಚಿಗೆ ಪಟ್ಟಣದ ಲಕ್ಷ್ಮಿನಗರದಲ್ಲಿ ಎರಡು ಮನೆ, ಬ್ಯೂಟಿ ಪಾರ್ಲರ್, ಆಸ್ಪತ್ರೆ , ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೂಕು ಕಛೇರಿ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು ದೋಚಿದ್ದರು. ರಾತ್ರಿ ವೇಳೆಯಲ್ಲಿ ಪೋಲಿಸರು ಗಸ್ತು ತಿರುಗುವುದು ಕಡಿಮೆಯಾಗಿರುವುದರಿಂದ ಕಳ್ಳತನ ನಡೆಯಲು ಸಹಕಾರವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. 

ರಾತ್ರಿ ವೇಳೆಯಲ್ಲಿ ಅನುಮಾನಸ್ಪದವಾಗಿ ತಿರುಗಾಡುವವರ ವಿರುದ್ಧ ಪೋಲಿಸರು ಕ್ರಮ ಕೈಗೊಳ್ಳಬೇಕು. ಗಸ್ತು ಹೆಚ್ಚಿಸುವ ಮೂಲಕ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ