ಬೆಳಗಾವಿ : ನಗರದ ಪ್ರಜ್ವಲ್ ಅಕಾಡೇಮಿ ವತಿಯಿಂದ ನಮ್ಮ ದೇಶ ನಮ್ಮ ಸಂಸ್ಕೃತಿ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾರತಿಯ ಸಂಸ್ಕೃತಿಯನ್ನು ಉಳಿಸುವ ದೃಷ್ಠಿಕೋನದಿಂದ ಅ.2 ರಂದು ಮಾಡುತ್ತಿದ್ದೆವೆ ಎಂದು ಪ್ರಜ್ವಲ್ ಮ್ಯುಸಿಕ್ ಅಕಾಡೆಮಿ ಸಂಚಾಲಕರಾದ ನಮೃತಾ ಜಾಹಗಿರದಾರ ಹೇಳಿದರು.
ಬುಧವಾರ ನಗರ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಹಿರಿಯ ನಾಗರಿಕರ ದಿನದ ಅಂಗವಾಗಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಅವರ ಜನ್ಮ ದಿನದಂದು ಈ ಕಾರ್ಯಕ್ರಮವನ್ನು ನಡೆಸುತ್ತೆವೆಂದು ಹೇಳಿದರು.
ನಗರದ ಹಿರಿಯ ನಾಗರಿಕರಿಗಾಯೇ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ನಗರದಲ್ಲಿ ಸರಿಸುಮಾರು 2 ಸಾವಿರ ಹಿರಿಯ ನಾಗರಿಕರಿರಬಹುದು ಎಂದು ಶಂಕಿಸಿದರು, ಎಲ್ಲ ಹಿರಿಯ ನಾಗರಿಕರು ಅಂದು ಸಂಜೆ 4 ಗಂಟೆಗೆ ಸೇರಿರಬೇಕು ಎಂದು ಕರೆ ನೀಡಿದರು. ಈ ಅಪರೂಪದ ಸಂಗಿತ ಕಾರ್ಯಕ್ರಮವನ್ನು ದೇಶ ಕಂಡ ಅಪರೂಪದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇ ಅವರ ಸ್ಮರಣೆಗಾಗಿ ಸಲ್ಲಿಸಲಾಗುವದೆಂದು ಎಂದರು
ಈ ಸಂದರ್ಭದಲ್ಲಿ ಅಡಿವೇಪ್ಪ ಬೆಂಡಿಗೇರಿ, ಅರವಿಂದ ಪಾಟೀಲ, ರತ್ನಪ್ರಭಾ ಬೆಲ್ಲದ, ಪಿಸಿ ಬೆಲ್ಲದ ಮುಂತಾದವರು ಉಪಸ್ಥಿತರಿದ್ದರು.