ರಾಯಬಾಗ 23: ಸ್ವಂತ ಉದ್ಯೋಗ ಮಾಡಲು ಬೇರೆಯವರ ಭರವಸೆ ಮೇಲೆ ಅವಲಂಬನೆ ಮಾಡದೇ ಸ್ವಪ್ರಯತ್ನದಿಂದ ಪರಿಶ್ರಮ ಪಡಬೇಕೆಂದು ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ತಾ.ಪಂ.ಸಭಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರ ಬೆಳಗಾವಿ ಇವರು ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಯುವಕರು ನಕಾರಾತ್ಮಕ ಯೋಚನೆಗಳನ್ನು ಬಿಟ್ಟು, ಸದಾ ಸಕಾರಾತ್ಮಕ ಯೋಚನೆ ಮಾಡಿ ಮುಂದೆ ಬಂದು, ಸರಕಾರದ ಯೋಜನೆಗಳ ಲಾಭ ಪಡೆದುಕೊಂಡು ಸ್ವಾಲಂಬನೆ ಜೀವನ ನಡೆಸಬೇಕೆಂದರು.
ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ದೊಡ್ಡಬಸವರಾಜು ಮಾತನಾಡಿ, ಉದ್ಯಮ ಸ್ಥಾಪನೆ ಮಾಡುವ ನಿರುದ್ಯೋಗ ಯುವಕರು ತಮ್ಮ ಸಾಮಥ್ರ್ಯವನ್ನು ಅರಿತು ಉದ್ಯಮವನ್ನು ಕೈಗೊಳ್ಳಬೇಕು. ಸರಿಯಾದ ನಿಧರ್ಾರ ಕೈಗೊಂಡು ಉದ್ಯಮ ಪ್ರಾರಂಭಿಸಿದರೆ ಉದ್ಯಮದಲ್ಲಿ ಯಶಸ್ಸು ಹೊಂದಲು ಸಾಧ್ಯ. ಪ್ರತಿಯೊಬ್ಬರಲ್ಲಿ ತಮ್ಮದೆ ಆದ ಪ್ರತಿಭೆ ಇರುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಉದ್ಯಮೆ ಸ್ಥಾಪನೆ ಮಾಡಿ, ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ವಿ ಉದ್ಯಮಿ ಆಗಲು ಸಾಧ್ಯವೆಂದು ಕೆಲವೊಂದು ಉದಾಹರಣೆಯೊಂದಿಗೆ ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದರ್ೇಶಕ ಕೆ.ಪಿ.ಗೋಟೂರ ಹಾಗೂ ಬೆಳಗಾವಿ ಸಿಂಡ್ ಆರ್.ಸೆ.ಟಿ ತರಬೇತಿಯ ಚಂದ್ರಕಾಂತ ಹಿರೇಮಠ ಅವರು ಮಾತನಾಡಿ, ಯೋಜನೆಗಳ ಬಗ್ಗೆ ಮತ್ತು ತರಬೇತಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಾರೂಗೇರಿ ಸಿಂಡಿಕೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆದಾರ ಮರಾಠೆ, ತಾ.ಪಂ.ಸದಸ್ಯರಾದ ನಾಮದೇವ ಕಾಂಬಳೆ, ಶ್ರವಣ ಕಾಂಬಳೆ ಹಾಗೂ ಗೋಮ್ಮಟೇಶ ಪಾಟೀಲ, ಸಾಗರ ಝೇಂಡೆನ್ನವರ, ಶಶಿಕಾಂತ ಕಾಂಬಳೆ, ರಾಕೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿ.ಕೈ.ಕೇಂದ್ರ ಚಿಕ್ಕೋಡಿ ಉಪವಿಭಾಗದ ಸಹಾಯ ನಿದರ್ೇಶಕ ರವೀಂದ್ರ ಮದಿಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾರೂಗೇರಿಯ ಹನಮಂತ ಸಣ್ಣಕ್ಕಿನವರ ಅವರು ತಮ್ಮ ಉದ್ಯಮೆಯಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ಬಗ್ಗೆ ಅನುಭವವನ್ನು ಹಂಚಿಕೊಂಡರು.
ರಾಯಬಾಗ ಕೈಗಾರಿಕಾ ವಿಸ್ತರಣಾಧಿಕಾರಿ ಎಮ್.ವಾಯ್.ಕೊಣ್ಣೂರು ನಿರೂಪಿಸಿ, ವಂದಿಸಿದರು.
ಬಾಕ್ಸ್ ಲೈನ್: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಲು ಸಹಾಯ ನಿದರ್ೇಶಕ ಪ್ರಾರಂಭಿಸುತ್ತಿದ್ದಂತೆ ತಾ.ಪಂ.ಸದಸ್ಯರು ಮತ್ತು ದಲಿತ ಯುವಕರು ಎದ್ದು ನಿಂತು, ಯಾರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ, ಎಷ್ಟು ಜನರಿಗೆ ಕಾರ್ಯಕ್ರಮ ಬಗ್ಗೆ ತಿಳಿಸಿದ್ದೀರಿ, ಎಷ್ಟು ಜನ ಪರಿಶಿಷ್ಟ ಜಾತಿಯ ಉದ್ಯಮಿಗಳು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಂದು ತಿಳಿಸಿ ಎಂದು ಪಟ್ಟು ಹಿಡಿದಾಗ, ಕೆಲವೊತ್ತು ಗೊಂದಲದ ವಾತಾವರಣ ನಿಮರ್ಾಣಗೊಂಡಿತು. ಅಧಿಕಾರಿಗಳ ಜೊತೆಗೆ ವಾಗ್ವಾದಕ್ಕೆ ಇಳಿದ ದಲಿತ ಯುವಕರು, ವಿಶೇಷ ಘಟಕದಡಿ ಉದ್ಯಮ ಸ್ಥಾಪಿಸಲು ಹೇಳುತ್ತೀರಿ, ಆದರೆ ಬ್ಯಾಂಕ್ದವರು ದಲಿತ ಯುವ ಉದ್ದಿಮೆದಾರರಿಗೆ ಸಾಲ ನೀಡುವುದಿಲ್ಲ. ಮೊದಲು ಇಂಥಹ ಕಾರ್ಯಕ್ರಮಗಳಿಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಯಿಸಿ ಎಂದು ಪಟ್ಟು ಹಿಡಿದರು. ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸುತ್ತ ತಾ.ಪಂ.ಸದಸ್ಯರು ಮತ್ತು ಕೆಲವೊಂದು ದಲಿತ ಯುವಕರು ಕಾರ್ಯಕ್ರಮದಿಂದ ಹೊರನಡೆದ ಪ್ರಸಂಗ ನಡೆಯಿತು.
ಕಾರ್ಯಕ್ರಮ ಸುಮಾರು 2 ಗಂಟೆಗಳ ಕಾಲ ತಡವಾಗಿ ಪ್ರಾರಂಭಗೊಂಡಿರುವುದನ್ನು ಕಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.