ಅಂತರಾಷ್ಟ್ರೀಯ ವಾಲ್ಟ ಕಾಂಗ್ರೆಸ್ ಸಮ್ಮೇಳನಕ್ಕೆ ಆಯ್ಕೆ

ಲೋಕದರ್ಶನ ವರದಿ

ಹುಬ್ಬಳ್ಳಿ 26:  ಖ್ಯಾತ ದಂತ ತಜ್ಞ ವೈದ್ಯ ಹಾಗೂ ಯಾವಗಲ್ ಹೆಲ್ತಕೇರ್ ಫೌಂಡೇಶನ್ ನಿದರ್ೇಶಕ ಡಾ.ಚಂದ್ರಶೇಖರ ಯಾವಗಲ್ ಅವರು ಪ್ರಾನ್ಸ ನೈಸ್ ನಗರದಲ್ಲಿ ಅಕ್ಟೋಬರ್ನಲ್ಲಿ ವಲ್ಡ್ ಅಸೋಸಿಯೇಶನ್ ಫಾರ್ ಲೇಸರ್ತೆರಪಿ (ವಾಲ್ಟ) ಏರ್ಪಡಿಸಿರುವ ಅಂತರಾಷ್ಟ್ರೀಯ ವಾಲ್ಟ ಕಾಂಗ್ರೆಸ್ 2018 ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.  ಡಾ.ಚಂದ್ರಶೇಖರ ಯಾವಗಲ್ ಅವರೊಬ್ಬರೇ ಭಾರತ ದೇಶದಿಂದ ವಾಲ್ಟ ಕಾಂಗ್ರೆಸ್ 2018 ಸಮ್ಮೇಳನದಲ್ಲಿ ಭಾಗವಹಿಸಲು ಅರ್ಹತೆ, ಗೌರವ ಹಾಗೂ ಲೇಸರ್ತೆರಪಿ ವಿಷಯದಲ್ಲಿ ಮಾಡಿದ ಸಂಶೋಧನೆ ಕುರಿತು ಪ್ರಬಂಧ ಮಂಡಿಸುವ ವಿಶéೇಷ ಅವಕಾಶ ಪಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ದಂತ ವೈದ್ಯಕೀಯ ಚಿಕಿತ್ಸಾ ಸೇವೆ ಸಲ್ಲಿಸುವುದರ ಜೊತೆಗೆ ಬೆಳಗಾವಿಯ ಮರಾಠಾ ಮಂಡಳ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ಮಾಡುತ್ತಿದ್ದಾರೆ. ಇಂಟರ್ನ್ಯಾಸನಲ್ ಡೆಂಟಿಸ್ಟ ಕಾಲೇಜ್ ಹಾಗೂ ಇಂಡಿಯಾ ಮೆಂಟರ್ ಫಾರ್ ಏಷೀಯನ್ ಲೇಸರ್ತೆರಪಿ ಆಕ್ಯಾಡೆಮಿಯ ಫೆಲೋ ಆಗಿದ್ದಾರೆ.

ಡಾ.ಚಂದ್ರಶೇಖರ ಯಾವಗಲ್ ಅವರ ಸಾಧನೆಯನ್ನು ಕನರ್ಾಟಕ ಐಎಂಎ ಉಪಾಧ್ಯಕ್ಷ  ಡಾ. ವಿ.ಬಿ.ನಿಟಾಲಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಡಾ.ಚಂದ್ರಶೇಖರ ಯಾವಗಲ್ ಅವರು ನಗರದಲ್ಲಿ ನೆಲೆಸಿದ್ದು ಹೆಮ್ಮೆ, ಅಭಿಮಾನ ಪಡುವ ವಿಷಯ ಎಂದು ಸಂತಸ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

**