ರಜತ ಪ್ರಶಸ್ತಿಗೆ ಕು.ಆರತಿ ಶಹಾಪುರ ಆಯ್ಕೆ: ಅಭಿನಂದನೆ
ವಿಜಯಪುರ, 11; ಕನ್ನಡಿಗರ ಅಚ್ಚುಮೆಚ್ಚಿನ ಕನ್ನಡಪ್ರಭ ದಿನಪತ್ರಿಕೆ ಹಾಗೂ ನೇರ, ದಿಟ್ಟ, ನಿರಂತರ ನಿಲುವಿನ ಸುವರ್ಣನ್ಯೂಸ್ ವಾಹಿನಿ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ರಜತ ಪ್ರಶಸ್ತಿಗೆ ಜಿಲ್ಲೆಯ ಕಾಂಗ್ರೆಸ್ ಯುವ ನಾಯಕಿಯೂ ಆಗಿರುವ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರು ಭಾಜನರಾಗಿದ್ದಾರೆ.
ಇಂತಹದೊಂದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಕಾಂಗ್ರೆಸ್ ಯುವ ನಾಯಕಿ ಹಾಗೂ ಕಾರ್ೊರೇಟರ್ ಕು.ಆರತಿ ಶಹಾಪುರ ಅವರಿಗೆ ಜಿಲ್ಲೆಯ ಸಮಾಜ ಸೇವಕರೂ ಆಗಿರುವ ಯುವಮುಖಂಡ ಮಂಜುನಾಥ್.ಎಸ್.ಕಟ್ಟಿಮನಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ ಹಾಗೂ ಪ್ರೀತ್ಯಾಭಿಮಾನದ ಆತ್ಮೀಯ ಸ್ನೇಹಿತೆಯೂ ಆಗಿರುವ ಕಾಂಗ್ರೆಸ್ ಯುವ ನಾಯಕಿ ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರಿಗೆ ಇದೇ ಫೆಬ್ರವರಿ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಮೂಲಕ ಕು.ಆರತಿ ಶಹಾಪುರ ಅವರು ಇತರ ಯುವತಿಯರಿಗೂ ಮಾದರಿಯಾಗಿದ್ದಾರೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯಪುರದ ಈ ಹೆಮ್ಮೆಯ ಭೀಮಪುತ್ರಿ, ಮಾದರಿ ಸಮಾಜ ಸೇವಕಿ ಹಾಗೂ ಭರವಸೆಯ ನಾಯಕಿಗೆ ಅಭಿನಂದಿಸಲು ನೀವೂ (ಮೊ:8073470615 ಸಂಖ್ಯೆಗೆ) ಕರೆ ಮಾಡಿ ಅಭಿನಂದಿಸಬಹುದು ಎಂದು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.