ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆ ಬೃಹತ್ ಪ್ರತಿಭಟನೆ

A massive protest by the self-respecting army in the district

ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆ ಬೃಹತ್ ಪ್ರತಿಭಟನೆ  

ಹಾವೇರಿ 11: ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕರ್ನಾಟಕದ ಕಬೀರ ಎಂದೇ ಖ್ಯಾತಿ ಪಡೆದಿರುವ ಸಂತ ಶಿಶುನಾಳ ಶರೀಫರ ಶರೀಫಗಿರಿಯನ್ನು ಅಭಿವೃದ್ಧಿಪಡಿಸಿ ರಾಜ್ಯ ಸರ್ಕಾರ ಬರುವ ಬಜೆಟ್‌ನಲ್ಲಿ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಬೇಕೆಂದು ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. 

ಜಿಲ್ಲಾ ಅಧ್ಯಕ್ಷರಾದ ರಾಮು ತಳವಾರ ಮಾತನಾಡಿ ಗ್ರಾಮೀಣ ಸೊಗಡಿನ ಸಂತ ಶಿಶುನಾಳ ಶರೀಫರು ಅಲೇಮಾರಿ ಸ್ವರೂಪಿಯಾಗಿ ನಾಡಿನಾದ್ಯಂತ ಸಂಚರಿಸಿ ತತ್ವಪದ,ಲಾವಣಿ, ಕೋಲಾಟ, ಹೆಜ್ಜೆಮೇಳ ಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ನಾಡಿನಲ್ಲಿ ಕೋಮು ಸೌಹಾರ್ಧತೆಯ ಮನೋಭಾವನೆಯನ್ನು ಮೂಡಿಸಿದ್ದಾರೆ. ಸೌಹಾರ್ಧತೆಯ ಈ ಹೆಜ್ಜೆಗುರುತುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಶರೀಫ ಪ್ರಾಧಿಕರ ರಚನೆಯು ಅಗತ್ಯವಾಗಿದೆ ಎಂದರು. 

ಕರವೇ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷರಾದ ಸುಮಾ ಪುರದ ಮಾತನಾಡಿ ಹಲವಾರು ದಶಕಗಳಿಂದ ಈ ಭಾಗದ ಸಾರ್ವಜನಿಕರು ಕನ್ನಡಪರ ಸಂಘಟನೆಗಳು,ವಿವಿಧ ಸಂಘ ಸಂಸ್ಥೆಗಳು ಪ್ರಾಧಿಕಾರ ರಚನೆಗಾಗಿ ಹೋರಾಟ ಮಾಡುತ್ತಾ ಬಂದಿದ್ದುರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಶರೀಫಗಿರಿ ಅಭಿವೃದ್ಧಿಗಾಗಿ ಈ ಹಿಂದಿನ ಸರಕಾರ ಸಾಕಷ್ಟು ಅನುದಾನ ನೀಡಿದ್ದರೂ ಸಹ ಪ್ರಾಧಿಕಾರ ರಚನೆ ಸಾಧ್ಯವಾಗಿಲ್ಲ. ಕಾರಣ ರಾಜ್ಯ ಸರಕಾರ ಬರುವ ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರಾಧಿಕಾರ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು. 

    ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಎಂ.ಕೆ. ತಿಮ್ಮಾಪುರ,ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಪ್ರೇಮಾ ಮುದಿಗೌಡ್ರ,ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕೋಲಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರಮಠ ಮುಖಂಡರಾದ ಪ್ರವೀಣ ಕಾಗದ, ಜಿಲ್ಲಾ ರೈತ ಘಟಕದ ಅಧ್ಯಕ್ಷರಾದ ಶರಣಪ್ಪ ಶಾಂತಗಿರಿ,ಉಮೇಶ ಮುದಿಗೌಡ್ರ,ಸುರೇಶ ವನಹಳ್ಳಿ,ಮಂಜುನಾಥ ದಾನಪ್ಪನವರ,ನಾಗರಾಜ ಯರಬಾಳ,ಮಹಾಂತೇಶ ಸಾರಂಗಮಠ, ಸುನಂದಮ್ಮ ಎಂ. ಪುಲಿಕಟ್ಟಿ,ನಿರ್ಮಲಾ ಶೀಲವಂತರ,ಗೌರಮ್ಮ ತೋಟಗೇರ,ದೀಪಾ ಹುಲ್ಲಣ್ಣನವರ,ಗದಿಗೆಪ್ಪ ಭರಮಗೌಡ್ರ,ಲಲಿತಮ್ಮ ಬ್ಯಾಡಗಿ,ಶಾಂತವೀರ​‍್ಪ ನೇಕಾರ ಸೇರಿದಂತೆ ಅನೇಕದ್ದರು.