ರೈತನೊಬ್ಬ ಹುಣಸಿ ಮರಕ್ಕೆನೇಣು ಬಿಗಿದುಕೊಂಡು ಆತ್ಮಹತ್ಯೆ

A farmer committed suicide by hanging himself from a tamarind tree

ರೈತನೊಬ್ಬ ಹುಣಸಿ ಮರಕ್ಕೆನೇಣು ಬಿಗಿದುಕೊಂಡು ಆತ್ಮಹತ್ಯೆ 

ಬ್ಯಾಡಗಿ  11: ತಾಲ್ಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಹುಣಸಿ ಮರಕ್ಕೆನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.ನೇಣಿಗೆ ಶರಣಾದ ಸಿದ್ದಪ್ಪ ಗುಡ್ಡಪ್ಪ ಸುಣಗಾರ (51) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.ಮೃತನು ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಕೆವಿಜಿ ಬ್ಯಾಂಕನಲ್ಲಿ ತಾನು ಹಾಗೂ ಸಂಬಂಧಿಕರ ಹೆಸರಿನಲ್ಲಿ 1500000 ಸಾಲ, ತನ್ನ ಹೆಂಡತಿ ಹೆಸರಿನಲ್ಲಿ ಪಟ್ಟಣದ ಪ್ರಗತಿ ಪ್ರಿನಿಸ್ಟರನಲ್ಲಿ 50000 ಸಾವಿರ, ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸಲ್ಲಿ ಮಗನ ಹೆಸರಿನಲ್ಲಿ 50000 ಸಾಲ ಮಾಡಿದ್ದು,  ಸೇರಿದಂತೆ ಇತರೇ ಹಲವು ಕಡೆ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಮತ್ತೊಂದೆಡೆ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಸರಿಯಾಗಿ ಬಾರದೇ ಇರುವ ಹಿನ್ನೆಲೆಯಲ್ಲಿ  ನಷ್ಟದ ಸುಳಿಗೆ ಸಿಲುಕಿದ್ದು, ಇದರಿಂದ ತೀವ್ರ ಮನನೊಂದು ಬುಡಪನಹಳ್ಳಿಯಿಂದ ಕಲ್ಲೇದೇವರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬರುವ ಷಣ್ಮುಖಪ್ಪ ಮರಿಯಮ್ಮನವರ ಹೊಲದ ಬದಿಯಲ್ಲಿ ಬರುವ ಹುಣಸಿ ಮರಕ್ಕೆ ನೇಣು ಬೀಗಿದು ಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.