ಕೆಲಸ ಕಳೆದುಕೊಂಡ ನಿರಾಶ್ರಿತ ಕುಟುಂಬದ ಸೆಕ್ಯುರಿಟಿ ನೌಕರರು

ಲೋಕದರ್ಶನ ವರದಿ

ಕಾರವಾರ 03: ನೌಕಾನೆಲೆಯವರು ಸೆಕ್ಯುರಿಟಿ ಕೆಲಸಕ್ಕೆಂದು ತೆಗೆದುಕೊಂಡಿದ್ದ ನಿರಾಶ್ರಿತರ ಕುಟುಂಬಗಳ 80 ಜನರನ್ನು ನ.1 ರಂದು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಘಟನೆ ನಡೆದಿದೆ. ಯಾವ ಮುನ್ಸೂಚನೆ ಇಲ್ಲದೇ ಕೆಲಸದಿಂದ ತೆಗೆದದ್ದು ಸರಿಯಲ್ಲ ಎಂದು ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ನಿರಾಶ್ರಿತರು ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು. 

ಮಹಾದೇವ ಸ್ಥಳೀಯ ಮತ್ತು ಭೂಮಿ ಕಳೆದು ಸೀಬರ್ಡ ನಿರಾಶ್ರಿತರ ಕಾಮರ್ಿಕರ ಯುನಿಯನ್ ನೇತೃತ್ವದಲ್ಲಿ ಮನವಿ ನೀಡಿದ ಅವರು ಶ್ರೀ ಶಿವಶಕ್ತಿ ಸೆಕ್ಯುರಿಟಿ ಏಜೆನ್ಸಿ ಅಡಿಯಲ್ಲಿ ಕದಂಬ ನೌಕಾನೆಲೆಯಲ್ಲಿ ಸೆಕ್ಯುರಿಟಿ ಕರ್ತವ್ಯ ಮಾಡುತ್ತಿದ್ದೆವು. ಈಗ ನೌಕಾನೆಲೆ ಅಧಿಕಾರಿಗಳು ಕೆಲಸಕ್ಕೆ ಬರಬೇಡಿ ಎಂದು ನೌಕಾನೆಲೆ ಪ್ರವೇಶದ ಪಾಸ್ ಕಸಿದುಕೊಂಡಿದ್ದಾರೆ. 

 ಸೀಬರ್ಡ ನೌಕಾನೆಲೆ 1998ರಲ್ಲಿ ಪ್ರಾರಂಭವಾದಾಗ ಭೂಮಿ,ಮನೆ ಕಳೆದು ಕೊಂಡ ನಿರಾಶ್ರಿತರ ಕುಟುಂಬಗಳ 80 ರಿಂದ 90  ಜನರನ್ನು ನೌಕಾನೆಲೆಯವರು ಸೆಕ್ಯುರಿಟಿ ಕೆಲಸಕ್ಕೆಂದು ತೆಗೆದುಕೊಂಡಿದ್ದರು. 20 ವರ್ಷಗಳಿಂದ ನಾವು ನೌಕಾನೆಲೆ ಅರ್ಗ ಬೇಸ್ ನಲ್ಲಿ ಕೆಲಸ ಮಾಡುತ್ತಿದ್ದೇವೆ. ಬಹುತೇಕ ಕಾಮರ್ಿಕರು ಅಗರ್ಾ, ಚೆಂಡಿಯಾ ಗ್ರಾಮದವರು ಆಗಿದ್ದೇವೆ. ಆರಂಭದಲ್ಲಿ 1700 ರೂ.ಗಳಿಗೆ ಕೆಲಸ ಮಾಡಿದ್ದೇವೆ. ಈಗ ವೇತನ ನೀಡಲು ಅನುದಾನ ಇಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ನಮ್ಮನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದು ಹಾಕಿದ್ದು ಸರಿಯಲ್ಲ. ಮಹಾದೇವ ಲೋಕಲ್ ಅಂಡ್ ಸೀಬರ್ಡ ಲ್ಯಾಂಡ್ ಲೂಜರ್ಸ ಲೇಬರ್ ಯುನಿಯನ್ ( ದಿನಗೂಲಿ ಕೆಲಸಗಾರರು ಮತ್ತು ಭೂಮಿ ಕಳೆದುಕೊಂಡ ನಿರಾಶ್ರಿತರ ಸಂಘ) ಕನರ್ಾಟಕ ಸೋಸೈಟಿ ಕಾಯ್ದೆ ಅಡಿ ನೊಂದಣಿಯಾಗಿದೆ. ನೊಂದಣಿಯಾದ ಸಂಘಟನೆಯವರನ್ನು ನೌಕಾನೆಲೆ ಐಎನ್ಎಸ್ ಕದಂಬದವರು ಏಕಾಏಕಿ ಕೆಲಸದಿಂದ ತಗೆಯಲು ಬರುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ದೀಪಲ್ ಉಗಾ ನಾಯ್ಕ ಹೇಳಿದರು. 

ಎಲ್ಲಾ ದಿನಗೂಲಿ ಗುತ್ತಿಗೆ ನೌಕರರು ಮತ್ತು ಸೆಕ್ಯುರಿಟಿಗಳನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಅನಂತಕುಮಾರ್ ಹೆಗಡೆ, ನೇವಲ್ ಬೇಸ್ ಆಡ್ಮಿರಲ್, ಕನರ್ಾಟಕ ನೇವಲ್ ಬೇಸ್ ಫ್ಲಾಗ್ ಆಫೀಸರ್, ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಹ ಮನವಿ ನೀಡಲಾಗಿದೆ. ನಮ್ಮ ಬೇಡಿಕೆಗೆ ಕೇಂದ್ರ ಸಕರ್ಾರ ಮತ್ತು ಸಚಿವರು ಸ್ಪಂದಿಸುವರೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಕೆಲಸ ಕಳೆದುಕೊಂಡ ನಿರಾಶ್ರಿತರು ಹೇಳಿದರು.