ಸವಣೂರ ದುರಂತ ಶಾಸಕ ಪಠಾಣ ಸಂತಾಪ
ಶಿಗ್ಗಾವಿ 23: ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿ ಮತ್ತು ನಮಗೆ ಸಂಪೂರ್ಣ ಸಹಕಾರ ನೀಡಿದ ಯಲ್ಲಾಪೂರ ಶಾಸಕ ಶಿವರಾಂ ಹೆಬ್ಬಾರ್,ಉ.ಕ.ಜಿಲ್ಲಾಡಳಿತ ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಶಾಸಕ ಯಾಸೀರಖಾನ ಪಠಾಣ ತಿಳಿಸಿದರು. ಸವಣೂರಿನಿಂದ ಕುಮಟಾ ಮಾರುಕಟ್ಟೆಗೆ ವ್ಯಾಪಾರಕ್ಕೆಂದು ತರಕಾರಿ, ಹಣ್ಣು ಹಾಗೂ ದಿನಸಿ ಸಾಮಗ್ರಿಗಳನ್ನು ಹೊತ್ತೊಯ್ದ ಲಾರಿ ಯಲ್ಲಾಪೂರ ತಾಲೂಕಿನ ಗುಳ್ಳಾಪೂರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಣೂರಿನ 29 ಜನ ಲಾರಿ ಅಡಿಯಲ್ಲಿ ಸಿಲುಕಿ ಹತ್ತು ಜನ ಪ್ರಾಣ ತೆತ್ತಿದ್ದಾರೆ ಇನ್ನೂಳಿದ 19 ಜನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತ್ವರಿತವಾಗಿ ವಿಪತ್ತು ನಿರ್ವಹಣಾ ಅಡಿಯಲ್ಲಿ ಚೆಕ್ ಮೂಲಕ ಬಿಡುಗಡೆಗೊಳಿಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಸರ್ಕಾರ ಸಂಪೂರ್ಣ ವೆಚ್ಚ ಭರಿಸಲು ಸಿದ್ದವಾಗಿದೆ ಎಂದರು.