ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಗೆ ಸಂಸ್ಕಾರ ರತ್ನ ಪ್ರಶಸ್ತಿ

Sanskara Ratna Award to Mallikarjuna Pattanashetty

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಗೆ  ಸಂಸ್ಕಾರ ರತ್ನ ಪ್ರಶಸ್ತಿ 

ದೇವರಹಿಪ್ಪರಗಿ, 10; ತಾಲೂಕಿನ ಯಾಳವಾರ ಗ್ರಾಮದ ಸಂಸ್ಕಾರಧಾಮ ಸಂಸ್ಥೆಯ ವತಿಯಿಂದ ಕೊಡಮಾಡುವ ಸಂಸ್ಕಾರ ರತ್ನ ಪ್ರಶಸ್ತಿಗೆ ‘ಕನ್ನಡ ಪ್ರಭ’ ದಿನಪತ್ರಿಕೆ ತಾಲೂಕು ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸೇರಿ 5 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರು: ಯಮನಪ್ಪ ಬೂದಿಹಾಳ (ಶಿಕ್ಷಣ ಕ್ಷೇತ್ರ), ಸಂಗಮೇಶ ಕರೆಪ್ಪಗೋಳ(ಸಾಹಿತ್ಯ ಕ್ಷೇತ್ರ), ಮಲ್ಲಿಕಾರ್ಜುನ ಪಟ್ಟಣಶೆಟ್ಟಿ (ಪತ್ರಿಕೋದ್ಯಮ ಕ್ಷೇತ್ರ), ರಾಘವೇಂದ್ರ ಉಮ್ಮರಗಿ (ರಂಗಭೂಮಿ ಕ್ಷೇತ್ರ) ಹಾಗೂ ಕಾಶಿನಾಥ ಪೂಜಾರಿ (ಜಾನಪದ ಕ್ಷೇತ್ರ) ಸಂಸ್ಕಾರಧಾಮ ಸಂಸ್ಥೆ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಸಂಸ್ಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಮಾರ್ಚ್‌ 11ರಂದು ಯಾಳವಾರ ಗ್ರಾಮದ ಸಂಸ್ಕಾರಧಾಮ ಸಂಸ್ಥೆಯ 13ನೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಂಸ್ಕಾರ ಉತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೆಡಗಾಪೂರ-ಯಾಳವಾರ ಸಂಸ್ಥಾನ ಮಠದ ಶ್ರೀ ಪ.ಪೂ. ದಾರುಕಾಲಿಂಗ ಶಿವಾಚಾರ್ಯರು, ಸಾನ್ನಿಧ್ಯವನ್ನು ಯಾಳವಾರ ಹಿರೇಮಠದ ವೇ.ಮೂ. ಶ್ರೀ ಬಸಯ್ಯ ಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ, ಯಾಳವಾರ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ರಾಜುಗೌಡ ನಾಡಗೌಡ್ರ ಜ್ಯೋತಿ ಬೆಳಗಿಸುವರು.  

ಮುಖಂಡರುಗಳಾದ ಮಾಜಿ ತಾ.ಪಂ ಸದಸ್ಯರಾದ ಎಮ್‌.ಸಿ. ನ್ಯಾಮಣ್ಣವರ, ಸಾಹೇಬಗೌಡ ದೊಡಮನಿ, ಸೋಮನಗೌಡ ಕೆಮಶೆಟ್ಟಿ, ಆರ್‌.ಎಸ್‌.ಪಾಟೀಲ, ಚೆನ್ನಪ್ಪ ಗೌಡ ಪಾಟೀಲ, ಬಿ.ಆರ್‌. ಪಾಟೀಲ, ವೆಂಕನಗೌಡ ಮೂಲಿಮನಿ, ದಯಾನಂದ ಗೌಡ ಪಾಟೀಲ, ಸಿದ್ದಣ್ಣ ಉತ್ನಾಳ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ.ಎಸ್‌. ಪಾಟೀಲ ಸೇರಿದಂತೆ ಹಲವಾರು ಜನ ಮುಖಂಡರು, ಗಣ್ಯರು, ಗ್ರಾಮದ ಪ್ರಮುಖರು, ಸಂಸ್ಥೆಯ ಪದಾಧಿಕಾರಿಗಳು ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಕಾರಧಾಮ ಸಂಸ್ಥೆಯ ಅಧ್ಯಕ್ಷರಾದ ಎಸ್ .ಕೆ.ಪಟೇದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ