ಜೆ.ಎನ್.ಗಣೇಶ್ ಬಂಧಿಸುವಲ್ಲಿ ಮೈತ್ರಿ ಸಕರ್ಾರ ಸಂಪೂರ್ಣ ವಿಫಲ

ಲೋಕದರ್ಶನ ವರದಿ

ಕಂಪ್ಲಿ 25:ಶಾಸಕ ಆನಂದ್ಸಿಂಗ್ ಮೇಲೆ ಹಲ್ಲೆ ಮಾಡಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧಿಸುವಲ್ಲಿ ಮೈತ್ರಿ ಸಕರ್ಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಆರೋಪಿಸಿದರು. 

ತಾಲ್ಲೂಕಿನ ಕೊಟ್ಟಾಲ್ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂನತ ಮೂತರ್ಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಬೆಂಗಳೂರಿನ ಈಗಲ್ಟನ್ ರೆಸಾಟರ್್ನಲ್ಲಿ ನಡೆದ ಹೊಡೆದಾಟದಲ್ಲಿ ಹೊಸಪೇಟೆ ಶಾಸಕ ಆನಂದ್ಸಿಂಗ್ಗೆ ಬಹಳ ಪೆಟ್ಟು ಬಿದ್ದಿರುವುದು ಗೋಚರವಾಗಿದೆ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಆನಂದಸಿಂಗ್ ಮೇಲೆ ಹಲ್ಲೆ ಮಾಡುವ ಮೂಲಕ ಕಂಪ್ಲಿ ಕ್ಷೇತ್ರದ ಜನರ ತಲೆ ತಗ್ಗಿಸುವಂತೆ ಮಾಡಿದ್ದಾರೆ. ರಾಜ್ಯದ ಜನರು ನೋಡುತ್ತಿದ್ದಾರೆ. ಗಣೇಶ್ನ ಹಲ್ಲೆಗೆ ತೀವ್ರ ವಿರೋಧವನ್ನು ಜನತೆ ಮಾಡುತ್ತಿದ್ದಾರೆ. ಜನಪ್ರತಿನಿಧಿಯಾಗಿ ಇಂತಹ ಘಟನೆಗಳನ್ನು ಮಾಡಬಾರದಿತ್ತು. ಕಳೆದ ಹತ್ತು ವರ್ಷದಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಮತದಾರರು ಅಧಿಕಾರ ನೀಡಿ, 6 ತಿಂಗಳಲ್ಲಿ ಆನಂದ್ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ದುಧರ್ೈವ. ಪೊಲೀಸ್ ಅಧಿಕಾರಿಗಳಿಂದ ನ್ಯಾಯಾ ದೊರಕಬೇಕಾಗಿದೆ. ಮೈತ್ರಿ ಸಕರ್ಾರ ಮತ್ತು ಕಾಂಗ್ರೆಸ್ ಮುಖಂಡರು ಗಣೇಶ್ನ ಬೆಂಬಲಕ್ಕೆ ನಿಂತಿದ್ದಾರೆ. ಹಲ್ಲೆ ಮಾಡಿದ ಶಾಸಕ ಗಣೇಶ್ನನ್ನು ಬಂಧಿಸುವಲ್ಲಿ ಸಕರ್ಾರ ವಿಫಲವಾಗಿದೆ. ಶಾಸಕರೇ ಹೊಡೆದಾಡಿದರೆ, ಮತದಾರರ ಪರಿಸ್ಥಿತಿ ಹೇಗೆ?. ಶಾಸಕ ಗಣೇಶ್ ಕಂಪ್ಲಿ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಕೂಡಲೇ ಸಕರ್ಾರ ಶಾಸಕ ಗಣೇಶ್ನನ್ನು ಬಂಧಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ನ್ಯಾಯ ಸಿಕ್ಕಂತಾಗುತ್ತದೆ. ಈಗಾಗಲೇ ಮತದಾರರು ನೋಡಿದ್ದು, ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಫೇಸ್ಬುಕ್ನಲ್ಲಿ ಗಣೇಶ್ ಪೋಸ್ಟರ್ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣವನ್ನು ಪತ್ತೆ ಹಚ್ಚಿ, ಗಣೇಶ್ನನ್ನು ಬಂಧಿಸಬೇಕು ಎಂದರು.

ಈಗಾಗಲೇ ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆ ಎದುರಿಸಲು ಸಕಲ ಸಿದ್ಧವಾಗಿದೆ. ಪಕ್ಷವನ್ನು ಬೂತ್ಮಟ್ಟದಿಂದ ದೊಡ್ಡ ಮಟ್ಟದಲ್ಲಿ ಬೆಳಸಲಾಗುವುದು. ನಿಷ್ಠಾವಂತ ಕಾರ್ಯಕರ್ತರಿಗೆ ಬಳ್ಳಾರಿ ಎಂಸಿ ಟಿಕೇಟ್ ಕೊಡಿಸಲಾಗುವುದು. ಎಂಪಿ ಟಿಕೆಟ್ ಆಕಾಂಕ್ಷಿ ನಾನಲ್ಲ ಎಂದು ಸ್ಪಷ್ಟಪರಿಸಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬುಗೆ ಸನ್ಮಾನಿಸಿ ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಜಿ.ರಾಮಣ್ಣ, ಜಿ.ಸುಧಾಕರ್, ಕೊಡಿದಲ್ ರಾಜು, ಎನ್.ರಾಮಂಜಿನೀಯಲು, ವಾಲ್ಮೀಕಿ ರಘು, ವಿ.ವಿದ್ಯಾಧರ, ವೆಂಕಟೇಶ್ವರ್ರಾವ್, ಸುಧೀರ್, ಜಯಪ್ರಕಾಶ್, ಬಸೇಜ್ರೆಡ್ಡಿ, ಹಣ್ಣಿನ ನಾಗರಾಜ, ಚಂದ್ರಕಾಂತ್ರೆಡ್ಡಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿದವು.