ಲೋಕದರ್ಶನ ವರದಿ
ಬ್ಯಾಡಗಿ01: ಮೋಟೆಬೆನ್ನೂರಿನ ನವೋದಯ ವಿದ್ಯಾ ಸಂಸ್ಥೆಯ ವಿದ್ಯಾಥರ್ಿ ಸಂಜೀವಕುಮಾರ ಬ್ಯಾಟಪ್ಪನವರ ಪ್ರೌಢಶಾಲಾ ವಿಭಾಗದ 400 ಮೀ.ಓಟದ ಅಂತರ ಜಿಲ್ಲಾ ಮಟ್ಟದ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಸಂಜೀವಕುಮಾರ ಸದ್ಯ ಹತ್ತನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದು ಇತ್ತೀಚೆಗೆ ಹಾವೇರಿಯಲ್ಲಿ ಜರುಗಿದ ಅಂತರಜಿಲ್ಲಾ ಮಟ್ಟದ ಸ್ಪಧರ್ೆಗಳಲ್ಲಿ ಅತ್ಯುತ್ಮಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾನೆ. ರಾಷ್ಟ್ರಮಟ್ಟದ ಸಧರ್ೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿವೆ. ಸಾಧನೆಗೈದ ವಿದ್ಯಾಥರ್ಿಗೆ ಶಾಲೆಯ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದೆ.