ಸಿಲಿಂಡರ ಸ್ಪೋಟದ ಸಂತ್ರಸ್ತರಿಗೆ ಸಂಜಯ ಪಾಟೀಲ ಭೇಟಿ

ಲೋಕದರ್ಶನ ವರದಿ

ಬೆಳಗಾವಿ 13: ಸಿಲಿಂಡರ ಸ್ಪೋಟದಿಂದಾಗಿ ಮನೆ ಸುಟ್ಟು ಹಾನಿಗೊಳಗಾದ ಸಮೀಪದ ಗಜಪತಿ ಗ್ರಾಮದ ಸಂತ್ರಸ್ಥ ಮಾರುತಿ ರುದ್ರಪ್ಪ ಕರಡಿ ಯವರ ಮನೆಗೆ ಮಾಜಿ ಶಾಸಕ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಟ್ಟೆ, ಬ್ಲಾಂಕೇಟ ಹಾಗೂ 1 ತಿಂಗಳಿಗಾಗುವಷ್ಟು ಮನೆ ಬಳಕೆ ಹಾಗೂ ಪಡಿತರ ಸಾಮಗ್ರಿ ವಿತರಿಸಿ ಮಾತನಾಡಿ ಸರಕಾರದಿಂದ ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಳ್ಳಲು ಅನುದಾನ ಕೊಡಿಸುವದಾಗಿ ಭರವಸೆ ನೀಡಿದರು. ಸ್ಥಳೀಯ ಗ್ರಾಪಂ ನಿಂದ ತಾತ್ಕಾಲಿಕ ಶೆಡ್ ನಿಮರ್ಿಸಿಕೊಳ್ಳಲು ಸಂತ್ರಸ್ಥರಿಗೆ 10 ಸಾವಿರ ರೂ. ಅನುದಾನ ಕೊಡಿಸುವದಾಗಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಮಾಜಿ ಅಧ್ಯಕ್ಷ ಗಂಗಾಧರ ಘಸಾರಿ ಹೇಳಿದರು.

ರಮೇಶಗೌಡ ಪಾಟೀಲ, ಸುನೀಲ ದಳವಾಯಿ, ಸಂತೋಷ ಅಂಗಡಿ, ರಮೇಶಗೌಡ ಪಾಟೀಲ(ಮಡ್ಡಿ), ವಜ್ರಕಾಂತ ಹಿರೇಮಠ, ಮಂಜು ಧರೆನ್ನವರ, ಸಂತೋಷ ಅಂಗಡಿ, ಬಸವರಾಜ ಡಮ್ಮಣಗಿ, ರವಿ ಪಾರ್ವತಿ, ಚನಬಸ್ಸಪ್ಪಾ ಲಂಗೂಟಿ, ಭೀಮನಗೌಡ ಪಾಟೀಲ, ದುಂಡಪ್ಪ ಮೆಳೇದ ಸೇರಿದಂತೆ ಹಲವರು ಇದ್ದರು.