ಬ್ಯಾಡಗಿ08: ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟು ಸಲೀಂ ನದೀಮುಲ್ಲಾ ಕನರ್ಾಟಕ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾನೆ.
ತಮಿಳುನಾಡಿನ ಕಟ್ಟಂಕುಲತೂರ (ಚನೈ) ಎಸ್.ಆರ್.ಎಂ.ವಿಶ್ವವಿದ್ಯಾಲಯದಲ್ಲಿ ಡಿ.12 ರಿಂದ 16 ರವರೆಗೆ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕವಿವಿ ತಂಡವನ್ನು ಪ್ರತಿನಿಧಿಸಲಿದ್ದಾನೆ. ಸಲೀಂ ನದೀಮುಲ್ಲಾನ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.